“ಮಿತ್ರೋ, ಶಹ-ಝಾದಾ ಬಗ್ಗೆ ನಾನು ಮಾತನಾಡುವುದಿಲ್ಲ. ಯಾರೂ ಮಾತನಾಡಲೂ ಬಿಡುವುದಿಲ್ಲ”
ಟ್ವೀಟ್ ಮೂಲಕ ಮೋದಿಯನ್ನು ಕುಟುಕಿದ ರಾಹುಲ್

ಹೊಸದಿಲ್ಲಿ, ಅ.20: ಅಮಿತ್ ಶಾ ಪುತ್ರ ಜೇ ಶಾ ಸಂಸ್ಥೆಯ ವ್ಯವಹಾರಗಳ ಬಗೆಗಿನ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮಿತ್ರೋ, ಶಹ-ಝಾದಾ ಬಗ್ಗೆ ನಾನು ಮಾತನಾಡುವುದಿಲ್ಲ. ಯಾರೂ ಮಾತನಾಡಲೂ ಬಿಡುವುದಿಲ್ಲ” ಎಂದು ಟ್ವೀಟ್ ಮಾಡಿ ಪ್ರಧಾನಿ ಮೋದಿಯವರನ್ನು ಕುಟುಕಿದ್ದಾರೆ.
ರಾಹುಲ್ ಗಾಂಧಿಯವರು ಹಿಂದಿಯಲ್ಲಿ ಈ ಟ್ವೀಟ್ ಮಾಡಿದ್ದು ಇದರೊಂದಿಗೆ ‘ದಿ ವೈರ್’ ವಿರುದ್ಧ ಮಾನನಷ್ಟ ಮೊಕದ್ದಮೆ ದಾವೆ ಹೂಡಿ ಜಯ್ ಶಾ ಅವರು ಅಹ್ಮದಾಬಾದ್ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ಪಡೆದ ಸುದ್ದಿಯ ಲಿಂಕನ್ನು ಪೋಸ್ಟ್ ಮಾಡಿದ್ದಾರೆ.
ಜಯ್ ಶಾ ಬರೆಯುವುದನ್ನು ನಿಷೇಧಿಸಿ ನ್ಯಾಯಾಲಯ ಹೊರಡಿಸಿದ ಆದೇಶದ ವರದಿಯನ್ನೂ ಅವರು ಟ್ಯಾಗ್ ಮಾಡಿದ್ದಾರೆ.
ಬಿಜೆಪಿ ಅಧಿಕಾರಕ್ಕೇರಿದ ನಂತರ ಜಯ್ ಶಾ ಸಂಸ್ಥೆಯ ವ್ಯವಹಾರದಲ್ಲಿ ಭಾರೀ ಏರಿಕೆಯಾಗಿದೆ ಎಂದು ವರದಿ ಮಾಡಿದ್ದ ‘ದಿ ವೈರ್’ ವಿರುದ್ಧ ಜೇ ಶಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
Next Story





