ದುಷ್ಕರ್ಮಿಗಳ ಗುಂಡಿಗೆ ಪೊಲೀಸ್ ಕಾನ್‌ಸ್ಟೆಬಲ್ ಬಲಿ

ಭೋಪಾಲ, ಅ. 20: ಮಧ್ಯಪ್ರದೇಶದ ಛಾತ್ರಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಯುಧ ಹೊಂದಿದ ಇಬ್ಬರು ದುಷ್ಕರ್ಮಿಗಳು ತಿರುಗಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾನ್‌ಸ್ಟೆಬಲ್ ಬಾಲಮುಕುಂದ್ ಪ್ರಜಾಪತಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಕ್ಕೆ ತೆರಳಿದ್ದರು. ಪ್ರಜಾಪತಿ ಅವರು ಪರ್ವಾರಿ ಮೊಹಲ್ಲಾ ಪ್ರದೇಶದಲ್ಲಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿದರು ಹಾಗೂ ಅಟ್ಟಿಸಿಕೊಂಡು ಹೋದರು. ಈ ಸಂದರ್ಭ ದುಷ್ಕರ್ಮಿಗಳು ಪ್ರಜಾಪತಿ ಮೇಲೆ ಗುಂಡು ಹಾರಿಸಿದರು ಎಂದು ಡಿಐಜಿ ಕೆ.ಸಿ. ಜೈನ್ ತಿಳಿಸಿದ್ದಾರೆ.
Next Story





