ದಿಲ್ಲಿ: ವಾಯು ಗುಣಮಟ್ಟ ಗಂಭೀರ, ಕಳೆದ ವರ್ಷಕ್ಕಿಂತ ಉತ್ತಮ

ಹೊಸದಿಲ್ಲಿ, ಅ. 20: ದಿಲ್ಲಿಯಲ್ಲಿ ದೀಪಾವಳಿ ಬಳಿಕದ ವಾಯು ಗುಣಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮವಾಗಿರ ಬಹುದು. ಆದರೆ, ನಗರದ ವಿವಿಧ ಭಾಗಗಳಲ್ಲಿ ಶುಕ್ರವಾರ ಮಾಲಿನ್ಯ ಸ್ವೀಕಾರಾರ್ಹ ಮಿತಿಗಿಂತ 15 ಪಟ್ಟು ಹೆಚ್ಚು ದಾಖಲಾಗಿದೆ. ದಿಲ್ಲಿಯಲ್ಲಿ ಕಳೆದ ವರ್ಷ ದೀಪಾವಳಿ ದಿನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಸೂಚ್ಯಂಕ 431 ಇತ್ತು. ಆದರೆ, ಈ ವರ್ಷ ಅದು 319ಕ್ಕೆ ಇಳಿದಿದೆ. ಶುಕ್ರವಾರ ನಗರದಲ್ಲಿ ಮಾಲಿನ್ಯದ ಮಟ್ಟ ಗಂಭೀರ ಸ್ಥಿತಿಗೆ ತಲುಪಿದೆ. ಪಟಾಕಿ ಸ್ಫೋಟದಿಂದ ವಾಯುಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಪಟಾಕಿ ನಿಷೇಧಿಸಿ ತೀರ್ಪು ನೀಡಿತ್ತು. ಆದರೂ ನಗರದ ವಿವಿಧ ಭಾಗಗಳಲ್ಲಿ ಗುರುವಾರ ರಾತ್ರಿ ಪಟಾಕಿ ಸಿಡಿಸಲಾಗಿದೆ.
Next Story





