ಸಿ.ಟಿ.ರವಿ ಬುಡಬುಡಿಕೆ ದಾಸಯ್ಯನಾಗಲಿ: ವಿಜಯಕುಮಾರ್
ಚಿಕ್ಕಮಗಳೂರು, ಅ.20: ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಹಿರಿಯ ರಾಜಕೀಯ ಮುತ್ಸದ್ಧಿ ಡಾ.ಜಿ. ಪರಮೇಶ್ವರ್‌ರ ಭವಿಷ್ಯ ಹೇಳಲು ಮುಂದಾಗಿರುವ ಶಾಸಕ ಸಿ.ಟಿ ರವಿ ಅವರು, ಶಾಸ್ತ್ರ ಹೇಳುವ ಬುಡಬುಡಿಕೆ ದಾಸಯ್ಯನಾಗುವುದು ಒಳಿತು ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್ ಶಾಸಕ ಸಿ.ಟಿ.ರವಿಗೆ ಸಲಹೆ ಮಾಡಿದ್ದಾರೆ.
ಡಾ. ಜಿ.ಪರಮೇಶ್ವರ್‌ರ ಕುರಿತು ಇತ್ತೀಚೆಗೆ ಸಿ.ಟಿ.ರವಿ ಸುದ್ದಿಗಾರರೊಂದಿಗೆ ಹಗುರವಾಗಿ ಮಾತನಾಡಿದ್ದರು. ಈ ಬಗ್ಗೆ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್ ಈ ಕುರಿತು ಹೇಳಿಕೆ ನೀಡಿದರು.
ಅವರ ಭವಿಷ್ಯದ ಬಗ್ಗೆ ಮಾತನಾಡಲು ಸಿ.ಟಿ.ರವಿ ಯಾರು, ಇತ್ತೀಚಿನ ದಿನಗಳಲ್ಲಿ ಮೋದಿಯ ಆಡಳಿತದ ಬಗ್ಗೆ ಭ್ರಮನಿರಸನಗೊಂಡಿರುವ, ಇತ್ತೀಚಿನ ಪಂಜಾಬ್ ಉಪಚುನಾವಣೆ ಹಾಗೂ ಮಹಾರಾಷ್ಟ್ರದ ನಾಂದೇಡದ ಫಲಿತಾಂಶಗಳು ಬಿಜೆಪಿಯ ಹಲವು ಶಾಸಕರನ್ನು ಭಯ ಬೀಳಿಸಿರಬಹುದು. ಹೀಗಾಗಿ ರಾಜ್ಯದ ಅಧ್ಯಕ್ಷರೂ ಆಗಿರುವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಬಿಜೆಪಿ ಶಾಸಕರುಗಳು ಮಾತನಾಡಿರಬಹುದು. ಪರಮೇಶ್ವರ್‌ರ ಭವಿಷ್ಯ ಹೇಳಲು ಹೊರಟಿರುವ ರವಿ ಅವರು ಬೇಲೂರು, ಬೆಂಗಳೂರಿನಲ್ಲಿ ಚುನಾವಣೆ ಎದುರಿಸಲು ಮುಖ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.







