ಭಾರತದಲ್ಲಿ ಫಿಫಾ ಯು-ವಿಶ್ವಕಪ್ ನಲ್ಲಿ ಪ್ರೇಕ್ಷಕರ ದಾಖಲೆ
ಹೊಸದಿಲ್ಲಿ, ಅ.20: ಭಾರತದಲ್ಲಿ ನಡೆಯುತ್ತಿರುವ ಫಿಫಾ ಅಂಡರ್-17 ವಿಶ್ವಕಪ್‌ಗೆ ಫುಟ್ಬಾಲ್ ಅಭಿಮಾನಿಗಳು ಉತ್ತಮ ಬೆಂಬಲ ನೀಡಿದ್ದಾರೆ. ಪ್ರೇಕ್ಷಕರ ಭಾಗವಹಿಸುವಿಕೆಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
ವಿಶ್ವಕಪ್ ಮುಗಿಯಲು ಇನ್ನೂ 9 ದಿವಸಗಳು ಬಾಕಿ ಉಳಿದಿದೆ. ಆದರೆ ಪ್ರೇಕ್ಷಕರ ಉತ್ಸಾಹ ಕಡಿಮೆಯಾಗಿಲ್ಲ. ಈ ವರೆಗೆ ಪ್ರೇಕ್ಷಕರ ಹಾಜರಾತಿ 10,07,396. ದಿಲ್ಲಿಯ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಪಂದ್ಯಗಳಲ್ಲಿ ಸರಾಸರಿ 49,000 ಪ್ರೇಕ್ಷಕರು ಭಾಗವಹಿಸಿದ್ದಾರೆ.
ಚೀನಾ ಮತ್ತು ಮೆಕ್ಸಿಕೊ ಬಳಿಕ ಭಾರತದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದ್ದಾರೆ. 1985ರಲ್ಲಿ ಚೀನಾದಲ್ಲಿ ನಡೆದ ವಿಶ್ವಕಪ್‌ನಲ್ಲಿ 12,30, 396 ಪ್ರೇಕ್ಷಕರು ಪಾಲ್ಗೊಂಡಿದ್ದರು. ಈ ದಾಖಲೆ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಪತನವಾಗುವ ಸಾಧ್ಯತೆಯಿದೆ.
Next Story





