ಮಂಗಳೂರು : ಬ್ಯಾಂಕ್ ಖಾತೆಯಿಂದ ಹಣ ಪಡೆದು ವಂಚನೆ
ಮಂಗಳೂರು, ಅ.21: ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬ್ಯಾಂಕ್ ಖಾತೆಯ ಎಟಿಎಂ ಪಿನ್ ಸಂಖ್ಯೆ ಕೇಳಿ 34,998 ರೂ. ಡ್ರಾ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಅ.16ರಂದು ಸಂಜೆ 5:36ಕ್ಕೆ ರೇವಣ್ಣರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿ ಬ್ಯಾಂಕ್ ಆಫ್ ಬರೋಡಾದ ಚಿಲಿಂಬಿಯಲ್ಲಿರುವ ಶಾಖೆಯ ಖಾತೆಯ ಎಟಿಎಂ ನಂಬ್ರ ಬದಲಾಗಿದೆ ಎನ್ನುತ್ತಾ ಎಟಿಎಂ ಪಿನ್ ಸಂಖ್ಯೆ ಕೇಳಿದರು. ಅದನ್ನು ನಂಬಿದ ರೇವಣ್ಣ ಎಟಿಎಂ ಪಿನ್ ನಂಬ್ರ ನೀಡಿದ್ದಾರೆ. ಬಳಿಕ ರೇವಣ್ಣರ ಈ ಖಾತೆಯಿಂದ ಹಂತ ಹಂತವಾಗಿ 34,998 ರೂ. ಡ್ರಾ ಮಾಡಲಾಗಿದೆ.
ಅಪರಿಚಿತ ವ್ಯಕ್ತಿಯು ಬ್ಯಾಂಕ್ ಸಿಬ್ಬಂದಿಯೆಂದು ನಂಬಿಸಿ ಮೋಸದಿಂದ ತನ್ನ ಖಾತೆಯಲ್ಲಿನ ಹಣವನ್ನು ಹ್ಯಾಕ್ ಮಾಡಿ ಡ್ರಾ ಮಾಡಿದ್ದಾರೆ ಎಂದು ರೇವಣ್ಣ ಉರ್ವ ಠಾಣೆಗೆ ದೂರು ನೀಡಿದ್ದಾರೆ.
Next Story





