‘ಬೆಂಗಳೂರು - ಕಾರವಾರ ರೈಲು ಪ್ರತಿದಿನ ಒಂದೇ ಮಾರ್ಗದಲ್ಲಿ ಓಡಲಿ’
ಉಡುಪಿ, ಅ.21: ಬೆಂಗಳೂರು ಮಂಗಳೂರು ಕಾರವಾರ ರೈಲು ಪ್ರತಿ ರಾತ್ರಿ ಒಂದೇ ಮಾರ್ಗದಲ್ಲಿ ಓಡುವಂತೆ ಮಾಡಬೇಕೆಂದು ಉಡುಪಿ ರೈಲ್ವೆ ಯಾತ್ರಿಕರ ಸಂಘವು ನೈಋತ್ಯ ರೈಲ್ವೆಗೆ ಮನವಿ ಮಾಡಿದೆ.
ಬೆಂಗಳೂರು ಮೈಸೂರು ಹಾಸನದವರೆಗಿನ 258 ಕಿ.ಮೀ. ದೂರವನ್ನು ತಲು ಪಲು ಈ ರೈಲು 5 ಗಂಟೆ ತೆಗೆದುಕೊಳ್ಳುತ್ತದೆ. ಯಶವಂತಪುರ ನೆಲಮಂಗಲ ಮಧ್ಯೆ 9ಕಿ.ಮೀ. ರೈಲ್ವೆ ಮಾರ್ಗವು ಕೆಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಅದರಲ್ಲಿ ಬೆಂಗಳೂರು ನೆಲಮಂಗಲ ಪ್ಯಾಸೆಂಜರ್ ರೈಲು ಓಡುತ್ತಿದೆ. ನೆಲ ಮಂಗಲ ಹಾಸನ 92 ಕಿ.ಮೀ. ರೈಲ್ವೆ ಮಾರ್ಗವು ಜನವರಿ 2017ರಲ್ಲಿ ಪ್ರಾರಂಭ ವಾಗಿ ಬೆಂಗಳೂರು ಹಾಸನವರೆಗಿನ ದೂರವು 107 ಕಿ.ಮೀ. ಆಗಿದೆ. ಅಂದರೆ ಈ ದೂರವು ಸುಮಾರು 151 ಕಿ.ಮೀ. ಕಡಿಮೆಯಾಗಿ 3 ಗಂಟೆಗಳ ಪ್ರಯಾಣ ಕಡಿಮೆಯಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ತಿಳಿಸಿದ್ದಾರೆ.
ಆದುದರಿಂದ ಮೈಸೂರು ರಾಮನಗರ ಮಂಡ್ಯದ ಜನತೆಗೆ ತೊಂದರೆಯಾಗ ದಂತೆಯೂ ಹಾಗೂ ರೈಲು ಸಮೀಪದ ಮಾರ್ಗದಲ್ಲಿ ಓಡಬೇಕು ಎಂಬ ಉದ್ದೇಶದಿಂದ ಉಡುಪಿ ರೈಲ್ವೆ ಯಾತ್ರಿಕರ ಸಂಘವು ಇದಕ್ಕೆ ಪರ್ಯಾಯ ವ್ಯವಸ್ಥೆ ತಯಾರಿಸಿದ್ದು, ಅದರ ಪ್ರಕಾರ ಪ್ರಸ್ತಾವಿತ ರೈಲು ಮೈಸೂರಿನಿಂದ ಪ್ರಾರಂಭ ವಾಗಿ ಬೆಂಗಳೂರಿಗೆ ಬಂದು ಅಲ್ಲಿಂದ ಹೊಸ ಮಾರ್ಗದಲ್ಲಿ ಓಡಿಸುವ ವೇಳಾ ಪಟ್ಟಿಯನ್ನು ತಯಾರಿಸಿ ನೈಋತ್ಯ ರೈಲ್ವೆಗೆ ಕಳುಹಿಸಿದೆ.
ಅದರಂತೆ ಮೈಸೂರಿನಿಂದ ಸಾಯಂಕಾಲ 5.40.ಕ್ಕೆ ಹೊರಟು ರಾತ್ರಿ 8.15ಕ್ಕೆ ಬೆಂಗಳೂರು ತಲುಪಿ ಹಾಸನಕ್ಕೆ ರಾತ್ರಿ 10ಗಂಟೆಗೆ, ಮಂಗಳೂರಿಗೆ ಬೆಳಿಗ್ಗೆ 4.45ಕ್ಕೆ ಹಾಗೂ ಅಲ್ಲಿಂದ ಕಾರವಾರಕ್ಕೆ ಬೆಳಿಗ್ಗೆ 10.40ಕ್ಕೆ ತಲುಪುತ್ತದೆ. ಹಾಗೆಯೇ ಹಿಂದಕ್ಕೆ ಕಾರವಾರದಿಂದ ಸಾಯಂಕಾಲ 4 ಗಂಟೆಗೆ ಹೊರಟು ಮೈಸೂರಿಗೆ ಮರುದಿನ ಬೆಳಿಗ್ಗೆ 8.35ಕ್ಕೆ ಮೈಸೂು ತಲುಪಲಿದೆ.
ನೈಋತ್ಯ ರೈಲ್ವೆಯು ಈಗಾಗಲೇ ನಿರ್ಣಯಿಸಿದ ಈ ರೈಲು ಹೊಸ ಮಾರ್ಗ ದಲ್ಲಿ ವಾರದಲ್ಲಿ 4 ದಿನ ಮತ್ತು ಹಳೆಮಾರ್ಗದಲ್ಲಿ ಉಳಿದ 3 ದಿನ ಓಡುವ ಪ್ರಸ್ತಾವನೆಯನ್ನು ಬಿಟ್ಟು ಈ ಮೇಲಿನ ವೇಳಾಪಟ್ಟಿಯಂತೆ ನಿತ್ಯ ಒಂದೇ ಮಾರ್ಗ ದಲ್ಲಿ ಓಡುವಂತೆ ಮಾಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







