ಪ್ರಗತಿಪರರ ಸಲಹೆಗಳನ್ನು ಡಾಕ್ಯುಮೆಂಟ್ ರೂಪದಲ್ಲಿ ಸರಕಾರಕ್ಕೆ ಸಲ್ಲಿಸಲಾಗುವುದು: ಲಿಂಗರಾಜು

ಕೊಳ್ಳೇಗಾಲ, ಅ.21: ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪ್ರಗತಿಪರರು, ಚಿಂತಕರು ಹಾಗೂ ಸಂಘ, ಸಂಸ್ಥೆಗಳ ಸಲಹೆಗಳನ್ನು ಡಾಕ್ಯುಮೆಂಟ್ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಡಿ.ಕೆ.ಲಿಂಗರಾಜು ತಿಳಿಸಿದ್ದಾರೆ.
ಪಟ್ಟಣದ ಸಿಡಿಎಸ್ ಭವನದಲ್ಲಿ ಶನಿವಾರ ನಡೆದ ಕೊಳ್ಳೇಗಾಲ ನಗರಸಭೆ, ಯಳಂದೂರು ಮತ್ತುಯ ಹನೂರು ಪಟ್ಟಣ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ವಿಷನ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕ ಸವಲತ್ತುಗಳನ್ನು ಒಂದೇ ಸೂರಿನಲ್ಲಿ ಸರ್ಕಾರ ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ವಿದ್ಯುತ್ ಸೌಲಭ್ಯ, ಮಹಿಳಾ ಮತ್ತು ಟ್ರಾಫಿಕ್ ಠಾಣೆಯನ್ನು, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಸೇರಿದಂತೆ ಹಲವಾರು ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತಹ ಸಲಹೆಗಳನ್ನು ನೀಡಿದ್ದಾರೆ ಸರ್ಕಾರದ ಗಮನಹರಿಸುವುದಾಗಿ ತಿಳಿಸಿದರು.
ನಾರಾಯಣ ಶಾಸ್ತ್ರಿ ಮಾತನಾಡಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಸ್ವರೂಪ ದರ್ಶನ ಬದಲಾಯಿಸಲು ಎಲ್ಲಾರ ಸಹಕಾರ ಅಗತ್ಯವಿದೆ ಆದ್ದರಿಂದ ಇಲ್ಲಿನ ಸಮಸ್ಯೆಗಳ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಶಾಂತರಾಜು ಮಾತನಾಡಿ, ನಮ್ಮ ನಗರಸಭೆಯನ್ನು ಪ್ರಥಮ ದರ್ಜೆಯನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಪಟ್ಟಣದ ಸುತ್ತಮುತ್ತಲಿನ ಕೆರೆಗಳನ್ನು ಪ್ರವಾಸಿ ತಾಣ ಹಾಗೂ ಉದ್ಯಾನವನಗಳನ್ನು ನಿರ್ಮಾಣ ಮಾಡಬೇಕಾಗಿದೆ. ತ್ಯಾಜ ಸಂಗ್ರಹಣವನ್ನು ವೈಜ್ಞಾನಿಕ ಘಟಕ ಮಾಡಬೇಕಿದೆ. ಬಡ ಜನರಿಗೆ ನಿವೇಶನ ಒದಗಿಸಬೇಕು, ನಿರುದ್ಯೋಗ ಹೋಗಲಾಡಿಸಲು ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂದು ಹೇಳಿದರು.
ಪಟ್ಟಣದ ಝಾಬೀನ ತಾಜ್ ಮಾತನಾಡಿ, ಪಟ್ಟಣದಲ್ಲಿ ಆರ್‍ಎಂಸಿ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 60 ಅಡಿ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಆರ್‍ಎಂಸಿ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚುತ್ತಿದೆ ಆ ರಸ್ತೆಯನ್ನು 80 ಅಡಿ ಅಗಲೀಕರಣ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ನಾಮ ನಿರ್ದೇಶಿತ ಸದಸ್ಯ ನರಸಿಂಹ ಮಾತನಾಡಿದರು. ಜಿಲ್ಲಾ ನಗರಾಭಿವೃದ್ದಿ ಇಇ ಸುರೇಶ್, ಪಿಡಿ ರವಿಕುಮಾರ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ, ಸದಸ್ಯರಾದ ಪರಮೇಶ್ವರಯ್ಯ, ಶಿವಾನಂದ, ರಮೇಶ್, ಕಲೀಮುಲ್ಲಾ, ಪ್ರಶಾಂತ್, ಎಇಇ ಗಂಗಾಧರ್, ವ್ಯವಸ್ಥಾಪಕ ಹೇಮಂತ್‍ಕುಮಾರ್, ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮತ, ಉಪಾಧ್ಯಕ್ಷ ಬಸವರಾಜು, ಯಳಂದೂರು ಪಟ್ಟಣ ಪಂಚಾಯತ್ ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಭೀಮಪ್ಪ, ಮುಖ್ಯಾಧಿಕಾರಿ ಉಮಾಶಂಕರ ಹಾಗೂ ಇನ್ನಿತರರು ಹಾಜರಿದ್ದರು.







