Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೆಳ್ತಂಗಡಿ: ಸಿಎಂಎಲ್ ನ 70ನೆ...

ಬೆಳ್ತಂಗಡಿ: ಸಿಎಂಎಲ್ ನ 70ನೆ ವರ್ಷಾಚರಣೆಯ ರಾಷ್ಟ್ರಮಟ್ಟದ ಸಮಾವೇಶ

ಸುಪ್ರೀಂಕೋರ್ಟಿನ ನ್ಯಾಯಾಧೀಶ ಜಸ್ಟಿಸ್ ಕುರಿಯನ್ ಜೋಸೆಫ್ ಹೇಳಿದ್ದೇನು?

ವಾರ್ತಾಭಾರತಿವಾರ್ತಾಭಾರತಿ21 Oct 2017 11:28 PM IST
share
ಬೆಳ್ತಂಗಡಿ: ಸಿಎಂಎಲ್ ನ 70ನೆ ವರ್ಷಾಚರಣೆಯ ರಾಷ್ಟ್ರಮಟ್ಟದ ಸಮಾವೇಶ

ಬೆಳ್ತಂಗಡಿ,ಅ.21: ಸೇವೆ ಹಾಗೂ ತ್ಯಾಗಪೂರ್ಣವಾದ ಜೀವನದ ಮೂಲಕ ಮಿಷನರಿಗಳು ಜಗತ್ತಿನಲ್ಲಿ ಯೇಸುಕ್ರಿಸ್ತರ ಪ್ರೀತಿಯ ಸಂದೇಶವನ್ನು ಸಾರುತ್ತಿದ್ದಾರೆ. ಸೇವೆ ಮಾಡುವುದು ಎಂದಿಗೂ ಮತಾಂತರಕ್ಕಾಗಿ ಅಲ್ಲ ಅದು ಗುರಿಯೂ ಅಲ್ಲ, ಉತ್ತಮ ಜೀವನ ನಡೆಸುವ ಮೂಲಕ ಇತರರಿಗೆ ಕ್ರಿಸ್ತರ ಸಂದೇಶವನ್ನು ನೀಡುವವನೇ ನಿಜವಾದ ಅರ್ಥದಲ್ಲಿ ಕ್ರೈಸ್ಥನಾಗುತ್ತಾನೆ ಎಂದು ಸುಪ್ರೀಂಕೋರ್ಟಿನ ನ್ಯಾಯಾಧೀಶರಾದ ಜಸ್ಟಿಸ್ ಕುರಿಯನ್ ಜೋಸೆಫ್ ಹೇಳಿದರು.

ಅವರು ಬೆಳ್ತಂಗಡಿಯ ಸಂತ ಲಾರೆನ್ಸ್ ಪ್ರಧಾನ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಕಿರಿಯ ಕುಸುಮ ಮಿಷನ್ ಲೀಗ್‍ನ (ಸಿಎಂಎಲ್) ಎಪ್ಪತ್ತನೆಯ ವರ್ಷಾಚರಣೆಯ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಪ್ರಮುಖ ಭಾಷಣಗಾರರಾಗಿ ಆಗಮಿಸಿ ಮಾತನಾಡಿದರು. ತಾನು ತನ್ನ ವ್ಯಕ್ತಿತ್ವವನ್ನು ಸಿಎಂಎಲ್ ಮೂಲಕವೇ ರೂಪಿಸಿಕೊಂಡವ ಎಂದು ಹೇಳಿದ ಅವರು ಈ ಸಂಘಟನೆ ಸೇವೆ, ತ್ಯಾಗ, ಪ್ರೀತಿ, ಸಹನೆಯ ಸಂದೇಶವನ್ನು ನೀಡುತ್ತಾ ತನ್ನ ಸದಸ್ಯರಲ್ಲಿ ಈ ಗುಣಗಳನ್ನು ಬೆಳೆಸುವ ಆಮೂಲಕ ಜಗತ್ತಿಗೆ ಸೇವೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದರು. ಯೇಸುಕ್ರಿಸ್ತರ ಸಂದೇಶವನ್ನು ಸಾರುವವರು ಮೊದಲು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ತಾನು ಅನುಭವಿಸಿದ ಕ್ರಿಸ್ತನನ್ನು ತನ್ನ ಬದುಕಿನ ಮೂಲಕ ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು, ಆದರ್ಶ ಬದುಕೇ ಕ್ರಿಸ್ತರ ಸಂದೇಶ ಸಾರುವ ಸಾಧನವಾಗಬೇಕೆ ಹೊರತು ಪುಸ್ತಕ ಭಾಷಣಗಳಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.  ಯಾವುದೇ ವೃತ್ತಿಯಲ್ಲಿರಲಿ ದೇವರಿಗೂ ಆತ್ಮಸಾಕ್ಷಗೂ ಅನುಗುಣವಾಗಿ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವ ಮೂಲಕ ಇತರರಿಗೆ ಪ್ರೇರಣೆ ನೀಡುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಲಶೇರಿ ಮಹಾ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಅತಿವಂದನೀಯ ಜಾರ್ಜ್ ಞರಳಕ್ಕಾಟ್ ವ್ಯಕ್ತಿತ್ವ ವಿಕಸನ ಮತ್ತು ಸೇವೆಯೇ ಸಿಎಂಎಲ್‍ನ ಗುರಿಯಾಗಿದ್ದು ದೇಶದಾಧ್ಯಂತ ಲಕ್ಷಾಂತರ ಮಂದಿ ಸದಸ್ಯರನ್ನು ಹೊಂದಿರುವ ಸಂಘಟನೆ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವರೂಪಿಸಿ ಅವರು ಬದುಕಿನಲ್ಲಿ ಉತ್ತಮ ಸಾಧನೆಗಳನ್ನು ಮಾಡಲು ಪ್ರೇರೇಪಿಸುತ್ತದೆ. ಕ್ರೈಸ್ಥ ಧರ್ಮಸಭೆ ತನ್ನ ಸೇವೆಯ ಮೂಲಕ ಸದಾ ಜನರ ನಡುವೆಯೇ ಬದುಕುತ್ತಿದೆ ಬೆಳೆಯುತ್ತಿದೆ, ಸೇವೆಯ ಮೂಲಕ ಕ್ರಿಸ್ತರ ಸಂದೇಶವನ್ನು ಪ್ರತಿನಿತ್ಯ ಸಾರುತ್ತಿದೆ, ಸೇವಾ ಮನೋಭಾವನೆಯಿರುವ ಯುವ ಸಮುದಾಯವನ್ನು ರೂಪಿಸುವ ಗುರಿಯೊಂದಿಗೆ ಸಿಎಂಎಲ್ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ ಸಂಘಟನೆಗೆ ಪ್ರಥಮ ಆಧ್ಯತೆಯನ್ನು ನೀಡಿ ಅದನ್ನು ಬೆಳೆಸುವ ಕಾರ್ಯವನ್ನು ಮಾಡಬೇಕು ಆಮೂಲಕ ಸಮಾಜದ ಮಕ್ಕಳ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದರು.

ಬೆಳ್ತಂಗಡಿ ಧರ್ಮಪದರಾಂತ್ಯದ ಧಮಾಧ್ಯಕ್ಷರಾದ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಅವರು  ಸಂಘಟನೆಯ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಿ ಮಾತನಾಡುತ್ತಾ ಇತರರ ಸಂತೋಷಕ್ಕಾಗಿ ತಮ್ಮ ಸಂತೋಷವನ್ನು ಕಳೆದುಕೊಳ್ಳಲು ಸಿದ್ದರಿರುವ ಯುವ ಸಮುದಾಯ ಇಂದಿನ ಅಗತ್ಯವಾಗಿದೆ. ಮಕ್ಕಳಲ್ಲಿ ಉತ್ತಮ ಆದರ್ಶಗಳನ್ನು ತುಂಬಿ ದೇವರ ದಾರಿಯಲ್ಲಿ ಮುನ್ನಡೆಸುವ ಕಾರ್ಯಕ್ಕೆ ಹೆಚ್ಚು ಮಹತ್ವನೀಡಿ ಎಲ್ಲರೂ ಎಲ್ಲರೂ ಸಿಎಂಎಲ್ ನಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭದ್ರಾವತಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಜೋಸೆಫ್ ಅರುಮಚ್ಚಾಡತ್, ಮಂಡ್ಯ ಧರ್ಮಪ್ರಾಂತ್ಯದ ಧಮಾಧ್ಯಕ್ಷರಾದ ಅತಿವಂದನೀಯ ಆಂಟನಿ ಕರಿಯಿಲ್. ಪುತ್ತೂರು ಧರ್ಮಪ್ರಾಂತ್ಯದ ಧಮಾಧ್ಯಕ್ಷರಾದ ಅತಿವಂದನೀಯ ಗೀವರ್ಗೀಸ್ ಮಾರ್‍ಮಕ್ಕಾರಿಯೋಸ್, ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಎಂಎಲ್‍ನ ರಾಷ್ಟ್ರೀಯ ಅಧ್ಯಕ್ಷರಾದ ಬಿನೋಯಿ ಪಳ್ಳಿಪರಂಬಿಲ್ ವಹಿಸಿದ್ದರು.

ವೇದಿಕೆಯಲ್ಲಿ ಸಂಘಟನೆಯ ಮುಖಂಡರುಗಳಾದ ಡೇವಿಸ್ ವಾಲೂರಾನ್, ಫಾ. ಹ್ಯಾರಿ ಡಿಸೋಜ, ರೋಯಿ ಮ್ಯಾಥ್ಯೂ, ಜ್ಞಾನಪ್ರಕಾಶ್, ಜೋರ್ಜ್‍ಕಾರಕ್ಕಲ್, ಫಾ.ಆಂಟನಿ ಪುದಿಯಪರಂಬಿಲ್, ಸುಜಿ ಥಾಮಸ್, ಹಾಗೂ ಇತರರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಸಿಎಂಎಲ್ ನಿರ್ಧೇಶಕರಾದ ಫಾ. ಜೋಸೆಫ್ ಮಟ್ಟಂ ಸ್ವಾಗತಿಸಿದರು, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಸುಜಿ ಥಾಮಸ್ ವರದಿ ವಾಚಿಸಿದರು, ಫಾ ಆಂಟನಿ ವರದಿ ವಾಚಿಸಿದರು

ಕಾರ್ಯಕ್ರಮಕ್ಕೂ ಮೊದಲು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಸಾವಿರಾರು ಮಂದಿ ಸಿಎಂಎಲ್ ಸದಸ್ಯರು ಭಾಗವಹಿಸಿದ್ದ ಭವ್ಯ ರ್ಯಾಲಿ ನಡೆಯಿತು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ರ್ಯಾಲಿ ಸಂತ ಲಾರೆನ್ಸ್ರ ಪ್ರಧಾನ ದೇವಾಲಯದ ಆವರಣದ ಭವ್ಯ ವೇದಿಕೆಯಲ್ಲಿ ಸಮಾವೇಶಗೊಂಡಿತ್ತು.  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X