Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 'ಕನ್ನಡ ನ್ಯೂಸ್ ಚಾನೆಲ್‌ಗಳಲ್ಲಿ'...

'ಕನ್ನಡ ನ್ಯೂಸ್ ಚಾನೆಲ್‌ಗಳಲ್ಲಿ' ಸ್ತ್ರೀಯರಿಗೆ ಹೇಳಿಸಿದ ಭಾಷೆಯೇ ಇದು?

ಡಾ. ಬಿ. ಭಾಸ್ಕರ ರಾವ್ಡಾ. ಬಿ. ಭಾಸ್ಕರ ರಾವ್22 Oct 2017 12:41 AM IST
share
ಕನ್ನಡ ನ್ಯೂಸ್ ಚಾನೆಲ್‌ಗಳಲ್ಲಿ ಸ್ತ್ರೀಯರಿಗೆ ಹೇಳಿಸಿದ ಭಾಷೆಯೇ ಇದು?

ರಾಜ್ಯ ಕಾಂಗ್ರೆಸ್, ಬಿಜೆಪಿ ಅಥವಾ ಇನ್ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಇಬ್ಬರು ಮಹಿಳಾ ಸದಸ್ಯೆಯರ ಅಥವಾ ಒಂದು ಮಟ್ಟದ ನಾಯಕಿಯರ ಮಧ್ಯೆ ಜಗಳ ಶುರುವಾದರೆ ಅದನ್ನು ‘ಜಡೆ ಜಗಳ’ ಎಂದು ಕರೆಯುವುದು ನಾವು ಒಪ್ಪಬಹುದಾದ, ಗೌರವಯುತವಾದ ಭಾಷಾ ಪ್ರಯೋಗವೇ?

ಸಾಹಿತ್ಯ ಮತ್ತು ಭಾಷೆಯ ವಿದ್ಯಾರ್ಥಿಯಾಗಿ, ಒಬ್ಬ ಲೇಖಕನಾಗಿ ಕಳೆದ ಹಲವು ವರ್ಷಗಳಿಂದ ನಾನು ಕನ್ನಡ ಟಿವಿ ಚಾನೆಲ್‌ಗಳಲ್ಲಿ ಬಳಕೆಯಾಗುವ ಭಾಷೆಯನ್ನು ಗಮನಿಸುತ್ತ ಬಂದಿದ್ದೇನೆ. ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳಲ್ಲಾಗಿರುವ ಬದಲಾವಣೆಗಳಿಗೆ ಅನುಗುಣವಾಗಿ ಮತ್ತು ಕರ್ನಾಟಕದ ವಿವಿಧ ಭಾಗಗಳ ವಿವಿಧ ಕನ್ನಡ ಭಾಷಾ ರೂಪಗಳ ಪರಿಣಾಮವಾಗಿ ಟಿವಿ ಚಾನೆಲ್‌ಗಳು ಸಮಗ್ರ ಕರ್ನಾಟಕದ ವೀಕ್ಷಕರನ್ನು ತಲುಪುವ ಉದ್ದೇಶದಿಂದ ಪ್ರಾದೇಶಿಕ ಭಾಷಾ ನುಡಿಗಟ್ಟುಗಳನ್ನು, ಮೆಚ್ಚುಗೆ-ಟೀಕೆಗೆ ಸಂಬಂಧಿಸಿ ಬೆಂಗಳೂರು-ಕೇಂದ್ರಿತ ನುಡಿ ನಮೂನೆಗಳನ್ನು ಬಳಸುವುದು ಸಹಜ ಮತ್ತು ಅನಿವಾರ್ಯ ಕೂಡ. ಇಂಗ್ಲಿಷ್, ಮುಖ್ಯವಾಗಿ ಬ್ರಿಟಿಷ್ ಇಂಗ್ಲಿಷ್, ಚಾನೆಲ್ ಆಗಿರುವ ಬಿಬಿಸಿ, ಒಂದು ನಿರ್ದಿಷ್ಟೀಕೃತ, (standardiseds) ಇಂಗ್ಲಿಷ್ ಬಳಸುವಂತೆ, ಒಂದು ನಿರ್ದಿಷ್ಟೀಕೃತ ಕನ್ನಡವನ್ನು ನಮ್ಮ ಚಾನೆಲ್‌ಗಳು ಬಳಸಲು ಸಾಧ್ಯವಿಲ್ಲ. ಒಂದು ಚಾನೆಲ್ ಬಳಸುವ ಕನ್ನಡ ಎಲ್ಲ ಕನ್ನಡಿಗರಿಗೂ, ಕರ್ನಾಟಕದ, ಜಗತ್ತಿನ ಎಲ್ಲ ಮೂಲೆಗಳಲ್ಲಿರುವ ಎಲ್ಲ ಕನ್ನಡ ಭಾಷಿಕರಿಗೂ ಅರ್ಥವಾಗುವವರೆಗೆ ಈ ಚಾನೆಲ್‌ಗಳು ಬಳಸುವ ಕನ್ನಡದ ಬಗ್ಗೆ ಯಾವುದೇ ಆಕ್ಷೇಪಗಳನ್ನು ಎತ್ತಬೇಕಾಗಿಯೂ ಇಲ್ಲ. ಕುಂದಾಪುರ ಕನ್ನಡ, ಉತ್ತರಕರ್ನಾಟಕ ಕನ್ನಡ ಅಥವಾ ಹವ್ಯಕ ಕನ್ನಡದ ಪದಗಳನ್ನು ಬಳಸಿದಲ್ಲಿ ಈ ಭಾಗಗಳ ಕನ್ನಡ ಭಾಷಿಕರನ್ನು ಹೊರಡುಪಡಿಸಿ, ಇತರ ಪ್ರದೇಶಗಳ ಕನ್ನಡ ಭಾಷಿಕರಿಗೆ ‘ಇದ್ಯಾವ ಕನ್ನಡ!’ ಎಂಬ ಆಶ್ಚರ್ಯ ಆಗದಿರಲಾರದು. ಯಾಕೆಂದರೆ ಇವು ಇಂಗ್ಲಿಷ್‌ನಲ್ಲಿರುವ ವಿವಿಧ ಇಂಗ್ಲಿಷ್‌ಗಳಂತೆ, ಕನ್ನಡಗಳೇ ಆದರೂ ಎಲ್ಲ ಕನ್ನಡ ಭಾಷಿಕರಿಗೂ ಅರ್ಥವಾಗುವ ಕನ್ನಡಗಳಲ್ಲ.

ಆದರೆ ಟಿವಿ ಚಾನೆಲ್‌ಗಳು ಬಳಸುವ ಕನ್ನಡ ಒಂದು ಪ್ರಜಾಸತ್ತಾತ್ಮಕ ಸಾಮಾಜಿಕ ಚೌಕಟ್ಟಿನಲ್ಲಿ, ಮೂಲಭೂತ ಪ್ರಜಾಸತ್ತಾತ್ಮಕ ವೌಲ್ಯಗಳಾದ ಸಮಾನತೆ, ಸ್ವಾತಂತ್ರ ಮತ್ತು ಭ್ರಾತೃತ್ವದ ಪರಿಕಲ್ಪನೆಗಳಿಗೆ ಅಪಚಾರವೆಸಗುವಂತಿರಬಾರದು. ಸಮಾನತೆ ಎಂದಾಗ ಗಂಡು, ಹೆಣ್ಣಿನ ಮಧ್ಯೆ ಇರಬೇಕಾದ ಎಲ್ಲ ರೀತಿಯ ಸಮಾನತೆಯ ಪರಿಕಲ್ಪನೆಗೆ ಚ್ಯುತಿ ಬರದಂತಹ ಭಾಷೆ ವಿದ್ಯುನ್ಮಾನ ಮಾಧ್ಯಮಗಳ ಭಾಷೆಯಾಗಿರಬೇಕಾಗುತ್ತದೆ.

ಕಳೆದ ಮೂರು-ನಾಲ್ಕು ದಶಕಗಳಲ್ಲಿ ವಿಶ್ವದಾದ್ಯಂತ ನಡೆದ ವಿವಿಧ ಸ್ತರಗಳ ಹಾಗೂ ಸ್ವರೂಪದ ಮಹಿಳಾ ವಿಮೋಚನಾ ಚಳವಳಿಗಳ ಪರಿಣಾಮವಾಗಿ ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನದಲ್ಲಿ, ತಾತ್ವಿಕವಾಗಿಯಾದರು. ಸಾಕಷ್ಟು ಬದಲಾವಣೆಗಳಾಗಿವೆ. ಪಾಶ್ಚಾತ್ಯ ಜಗತ್ತಿನಲ್ಲಿ ಕೇಟ್ ಮಿಲೆಟ್, ಗ್ಲೋರಿಯಾ ಮೇರಿ ಸ್ಟೀನಮ್ಸ್, ಜರ್ಮೈನ್ ಗ್ರಿಯರ್‌ರಂತಹ ಮಹಿಳಾವಾದಿಗಳು ತಮ್ಮ ಬರವಣಿಗೆಗಳ ಮೂಲಕ ಉಂಟುಮಾಡಿದ ಪರಿಣಾಮಗಳು, ಪರೋಕ್ಷವಾಗಿ, ಭಾರತದ ಮೇಲೂ ಆಗಿವೆ. ಅಲ್ಲಿ ಮಹಿಳಾವಾದಿಗಳು ಇಂಗ್ಲಿಷ್ ಭಾಷೆಯಲ್ಲಿರುವ ಪುರುಷ ಪ್ರಾಧಾನ್ಯ ಪದಪುಂಜಗಳ ಕುರಿತು ಎತ್ತಿದ ಆಕ್ಷೇಪಗಳ, ತಕರಾರುಗಳ ಪರಿಣಾಮಗಳ ‘ರಾಜಕೀಯ ಸರಿತನ’ (ಪೊಲಿಟಿಕಲ್ ಕರೆಕ್ಟ್‌ನೆಸ್)ದ ಪರಿಕಲ್ಪನೆ ಪ್ರಬಲಗೊಂಡು, ಮಹಿಳೆಯರಿಗೆ ಸಂಬಂಧಿಸಿ ಭಾಷೆಯನ್ನು ಬಳಸುವಾಗ, ಅದು ಹೆಣ್ಣೆಂಬ ಕಾರಣಕ್ಕಾಗಿ ಒಬ್ಬಾಕೆಯನ್ನು ಅಪಮಾನಿಸುವಂತಿರಬಾರದು, ಆಕೆಗೆ ಲಿಂಗಾಧಾರಿತವಾಗಿ ಅವಹೇಳನ ಮಾಡುವಂತಿರಬಾರದು ಮತ್ತು ಆಕೆಯ ಜನಾಂಗ/ಜಾತಿ/ ಸಮುದಾಯ ಸೂಚಕವಾಗಿರಬಾರದು; ಬದಲಾಗಿ ಅದು ನಾನ್-ಸೆಕ್ಸಿಯೆಸ್ಟ್, ನಾನ್-ಜೆಂಡರ್ ಸ್ಪೆಸಿಪಿಕ್ಸ್, ಮತ್ತು ನಾನ್-ರ್ಯಾಸಿಸ್ಟ್ ಭಾಷೆಯಾಗಿರಬೇಕು ಎಂಬುದು ಸಾರ್ವತ್ರಿಕವಾಗಿ ಅಂಗೀಕೃತವಾಗಿ ದಶಕಗಳೇ ಕಳೆದಿವೆ. ಆದರೆ ನಾವಿನ್ನೂ ಈ ನಿಟ್ಟಿನಲ್ಲಿ ಸಾಕಷ್ಟು ಬದಲಾಗಿರುವಂತೆ ಕಾಣಿಸುತ್ತಿಲ್ಲ.

ನಾನು ಈ ಮಾತನ್ನು ಯಾಕೆ ಹೇಳಬೇಕಾಯಿತೆಂದರೆ 15.10.2017ರಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಟಿವಿ ಮುಂದೆ ಕನ್ನಡ ನ್ಯೂಸ್ ಚಾನೆಲ್ ಒಂದರಲ್ಲಿ ಬರುತ್ತಿದ್ದ ವಾರ್ತೆಗಳನ್ನು ಕೇಳುತ್ತ, ನೋಡುತ್ತ, ಕುಳಿತಿದ್ದ ನನಗೆ ಟಿವಿ ಪರದೆಯ ಮೇಲೆ ‘‘ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿದೆ ಜಡೆಜಗಳ’’ ಮತ್ತು ‘‘ಲಕ್ಷ್ಮೀ ಲಕಲಕ’’ ಎನ್ನುವ ವಾಕ್ಯಗಳು ಕಾಣಿಸಿದ್ದವು. ಬೆಳಗಾವಿಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಸಂಬಂಧಿಸಿ ಪಕ್ಷದಲ್ಲಿ ಒಂದು ಸ್ಥಾನಕ್ಕಾಗಿ ಇಬ್ಬರು ಮಹಿಳೆಯರ ನಡುವೆ ನಡೆಯುತ್ತಿರುವ ಸ್ಪರ್ಧೆಗೆ ಸಂಬಂಧಿಸಿದ ವರದಿ ಅದಾಗಿತ್ತು.

ರಾಜ್ಯ ಕಾಂಗ್ರೆಸ್, ಬಿಜೆಪಿ ಅಥವಾ ಇನ್ಯಾವುದೇ ಒಂದು ರಾಜ ಕೀಯ ಪಕ್ಷದಲ್ಲಿ ಇಬ್ಬರು ಮಹಿಳಾ ಸದಸ್ಯೆಯರ ಅಥವಾ ಒಂದು ಮಟ್ಟದ ನಾಯಕಿಯರ ಮಧ್ಯೆ ಜಗಳ ಶುರುವಾದರೆ ಅದನ್ನು ‘ಜಡೆ ಜಗಳ’ ಎಂದು ಕರೆಯುವುದು ನಾವು ಒಪ್ಪಬಹುದಾದ, ಗೌರವಯುತವಾದ ಭಾಷಾ ಪ್ರಯೋಗವೇ? ‘ಜಡೆ’ ಎನ್ನುವ ಪದವನ್ನು ತೀರ ಸಾಮಾನ್ಯಳಾದ, ಪ್ರಾಯಶಃ ಅಸಹಾಯಕಳೂ ಆದ, ಗಂಡು ಕೀಳಾಗಿ ಕಾಣುವ ಒಂದು ಹೆಣ್ಣಿಗೆ ‘ಮಹಿಳೆ’ ಎಂಬ ಪದಕ್ಕೆ ಪರ್ಯಾಯವಾಗಿ ಬಳಸುವ, ಗೌರವ ಸೂಚಕವಲ್ಲದ ಅಥರ್ದಲ್ಲಿ ಬಳಸುವ ಶಬ್ದ. ‘ಜಡೆ ಜಗಳ’ ಎಂದಾಗ ಘನವಂತ ಪುರುಷರಲ್ಲಿ ‘‘ಓಹೋ ಅದಾ? ಆ ಜಗಳವಾ ಬಿಡಿ, ಅದೇನು ಮಹಾ! ಅದು ಎಷ್ಟೆಂದರೂ ಯಾವಾಗಲೂ ಇದ್ದದ್ದೆ! ಹೆಂಗಸರ ಜಗಳ. ಹೆಂಗಸು-ಹೆಂಗಸಿನ ನಡುವೆ ಮಾಮೂಲಿಯಾಗಿ ನಡೆಯುವ ಜುಜುಬಿ ಜಗಳ. ನಾವು, ಗಂಡಸರು, ಮಹತ್ವ ಕೊಡಬೇಕಾದಂತಹ ಜಗಳ ಅಲ್ಲ ಎಂಬ ಭಾವನೆ ಇರುವಂತೆ ತೋರುತ್ತದೆ.

‘‘ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿದೆ. ಜಡೆಜಗಳ’’ ಎಂಬ ವಾಕ್ಯದ ಮೇಲ್ಪದರ ರಚನೆ (ಸರ್ಫೇಸ್ ಸ್ಟ್ರಕ್ಚರ್) ಮಹಿಳೆಯರಿಬ್ಬರ ನಡುವೆ ಒಂದು ವಿಷಯಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯ, ವಿವಾದ ತಲೆದೋರಿದೆ’ ಎಂಬ ಅರ್ಥವನ್ನು ಸ್ಫುರಿಸುವ ಭ್ರಮೆಯನ್ನು ಹುಟ್ಟಿಸುತ್ತದಾದರೂ ಅದು, ತನ್ನ ಆಳ ಸಂರಚನೆ (ಡೀಪ್ ಸ್ಟ್ರಕ್ಚರ್)ಯಲ್ಲಿ ‘‘ಶುರುವಾಯ್ತು ಪುನಃ ಈ ಹೆಂಗಸರ ತರಲೆ, (ಗಂಡಸರಿಗೆ ಮನೋರಂಜನೆಯ ದೃಶ್ಯವಾಗುವ ಇಬ್ಬರು ಮಹಿಳೆಯರ ನಡುವಣ ಪರಸ್ಪರ ಕೂದಲು(ಜಡೆ) ಕಿತ್ತಾಟ) ಯಾಕಾಗಿ ಇಂತಹವುಗಳಿಗೆ ಪಕ್ಷದಲ್ಲಿ ಜಬಾಬ್ದಾರಿಯುತ ಸ್ಥಾನ ನೀಡುತ್ತಾರೋ?’’ ಎಂಬಂತಹ, ಮಹಿಳೆಯರಿಗೆ ತೀರ ಅವಮಾನಕಾರಿಯಾದ ಅರ್ಥ ನೀಡುತ್ತದೆ. ತೋರಿಕೆಯ ವಾಚ್ಯ ಆಳದ ಸೂಚ್ಯದಲ್ಲಿ, ಸುಪ್ತವಾಗಿ, ಮೇಲ್ನೋಟಕ್ಕೆ ಗೊತ್ತೇ ಆಗದಂತೆ ಮಹಿಳೆಯರನ್ನು ಅವಮಾನಿಸುತ್ತದೆ.

ಇಂತಹುದೇ ಅವಮಾನದ ಧ್ವನಿ, ಸಂಬಂಧಿತ ನ್ಯೂಸ್ ಚಾನೆಲ್ ಬಳಸಿ ‘‘ಲಕ್ಷ್ಮೀ ಲಕಲಕ’’ ಎಂಬ ಪದಪುಂಜದ ‘‘ಲಕ ಲಕ,’’ ಎಂಬ ಕಿವಿಗೆ ಬಿದ್ದೊಡನೆ ಕೇಳುಗರ ಮುಖದಲ್ಲಿ ನಗು ಕಂಡುಬರುವ ಶಬ್ದಗಳಲ್ಲೂ ಇದೆ.

ನನ್ನ ವಾದವನ್ನು ಇನ್ನೊಂದು ರೀತಿಯಲ್ಲಿ ಮಂಡಿಸು ತ್ತೇನೆ: ಬೆಳಗಾವಿ ಕಾಂಗ್ರೆಸ್‌ನಲ್ಲಿ ನಡೆದ ವಿದ್ಯಮಾನ ಮೀಸೆ ಹೊತ್ತ ಇಬ್ಬರು ನಾಯಕರ ಮಧ್ಯೆ ನಡೆದಿದ್ದರೆ ಆಗ ಟಿವಿ ಚಾನೆಲ್ ‘‘ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿದೆ. ಮೀಸೆ ಜಗಳ’’ ಎಂದು ವರದಿ ಮಾಡುತ್ತಿತ್ತೇ? ಅಥವಾ ಆ ಇಬ್ಬರು, ಈಗ ಒಂದು ಫ್ಯಾಶನ್ ಆಗಿರುವ ಗಡ್ಡಧಾರಿಗಳಾಗಿದ್ದಲ್ಲಿ ಚಾನೆಲ್ ‘‘ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿದೆ ಗಡ್ಡ ಜಗಳ’’ ಎಂದು ವರದಿ ಮಾಡುತ್ತಿತ್ತೇ? ‘‘ಲಕ್ಷ್ಮೀ ಲಕಲಕ’’ ಎಂದ ಹಾಗೆಯೇ ಯಾರೋ ಒಬ್ಬ ‘‘ಪಾಟೀಲ್ ಪಟಪಟ’’ ‘‘ಕಮಲೇಶ್ ಕಟಕಟ’’ ‘‘ಗೌಡ ಗಡಗಡ’’ ಎಂಬ ಹೇಳುತ್ತಿತ್ತೇ?

ಹಾಗಾದರೆ ಪ್ರೇಕ್ಷಕರನ್ನು ಸ್ವಲ್ಪ ನಗಿಸುವ, ಒಂದು ರೀತಿಯ ಜೋಕ್ ತರಹದ ರೀತಿಯಲ್ಲಿ ಘಟನೆಯೊಂದನ್ನು ವರದಿ ಮಾಡು ವುದು ತಪ್ಪೇ? ಎಂಬ ಪ್ರಶ್ನೆ ಏಳಬಹುದು. ಆದರೆ ನಗುತರಿಸುವ ಪ್ರತಿಯೊಂದು ಪ್ರಸಂಗದ ಹಿಂದೆಯೂ ಎದುರಾಳಿಯನ್ನು ಮಣಿಸುವ ಎದುರಾಳಿಯ ಮೇಲೆ ಪ್ರತೀಕಾರ ಎಸಗುವ, ಎದುರಾಳಿ (ಜೋಕಿಗೆ ಗುರಿಯಾಗುವ ವ್ಯಕ್ತಿ/ಸಮುದಾಯ/ಜಾತಿ/ಜನಾಂಗ)ಯನ್ನು ಅವಮಾನಿಸುವ ಪ್ರತ್ಯಕ್ಷ ಅಥವಾ ಪರೋಕ್ಷ ಉದ್ದೇಶ ಇದ್ದೇ ಇರುತ್ತದೆ. ಈ ಬಗ್ಗೆ ಎಲ್‌ಪಿ ಲೆಗ್‌ಮನ್ ನಾಲ್ಕು ದಶಕಗಳ ಹಿಂದೆಯೇ ಮೂರು ಸಂಪುಟಗಳಷ್ಟು ಸಂಶೋಧಿತ ಪುಸ್ತಕಗಳನ್ನು ಪ್ರಕಟಿಸಿದ್ದಾನೆ.

ನಮ್ಮ ಮಾಧ್ಯಮಗಳು ನಮ್ಮ ರಾಜಕಾರಣಿಗಳ ಹಾಗೆಯೇ, ತಾವು ಬಳಸುವ ಭಾಷೆಯಲ್ಲಿ ಪ್ರತೀ ಶಬ್ದದಲ್ಲಿ ಸಂವೇದನಾ ಶೂನ್ಯತೆಯನ್ನು ಪ್ರಕಟಿಸದಂತೆ ಸದಾ ಎಚ್ಚರವಾಗಿರಬೇಕಾಗುತ್ತದೆ.

ಭಾಷೆ ಕನ್ನಡಿಯ ಹಾಗೆ ಒಡೆದದ್ದನ್ನು ಜೋಡಿಸುವುದು ಕಷ್ಟ. ಆದ ಅವಮಾನಕ್ಕೆ ಸ್ಪಷ್ಟೀಕರಣ ನೀಡಿದರೂ ಆದದ್ದು ಆಗಿಯೇ ಹೋಗಿರುತ್ತದೆ.

share
ಡಾ. ಬಿ. ಭಾಸ್ಕರ ರಾವ್
ಡಾ. ಬಿ. ಭಾಸ್ಕರ ರಾವ್
Next Story
X