ಪಡುಬಿದ್ರಿ ರೋಟರಿಯಿಂದ ಒಂಟಿ ಮಹಿಳೆ ಮನೆಯಲ್ಲಿ ದೀಪಾವಳಿ
ಪಡುಬಿದ್ರಿ,ಅ.21: ಹೆಜಮಾಡಿ ಗ್ರಾಮದ ಕೊಕ್ಕರ್ಣೆ ಕುದ್ರುವಿನ ಅಪ್ಪಿ ಪೂಜಾರ್ತಿ ಮನೆಯಲ್ಲಿ ರೋಟರಿ ಕ್ಲಬ್ ಪಡುಬಿದ್ರಿ ವತಿಯಿಂದ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕೊಕ್ಕರ್ಣೆ ನಿವಾಸಿ ಅಪ್ಪಿ ಪೂಜಾರ್ತಿಯವರು 15ವರ್ಷಗಳಿಂದ ಕೊಕ್ಕಣೆ ಎಂಬ ಕುದ್ರುವಿನಲ್ಲಿ ವಾಸಿಸುತಿದ್ದಾರೆ. ಅವಿವಾಹಿತರಾಗಿದ್ದ ಇವರು ಆರ್ಥಿಕವಾಗಿ ಹಿಂದುಳಿದಿದ್ದರು. ಆ ಮನೆಯನ್ನು ಗುರುತಿಸಿ ಶುಕ್ರವಾರ ಸಂಜೆ ದೀಪ ಬೆಳಗಿಸಿ ಅವರಿಗೆ ಒಂದು ತಿಂಗಳ ದಿನಬಳಕೆ ಸಾಮಾಗ್ರಿಗಳು, ಹೊಸ ಸೀರೆ, ಸಿಹಿ ತಿಂಡಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್, ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಪ್ರಮುಖವಾದೂದು. ಇಂತಹ ಕಾರ್ಯಕ್ರಮಗಳ ಬಡವರ ಬಾಲಿನಲ್ಲಿ ಕತ್ತಲಿನಿಂದ ಬೆಳಕಿನಡೆಗೆ ಕೊಡೊಯ್ಯಲು ಸಹಕಾರಿಯಾಗುತ್ತದೆ ಎಂದರು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಮೀಝ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ವಲಯ ಸೇನಾನಿ ಪಿ.ಕೃಷ್ಣ ಬಂಗೇರಾ, ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್, ಪೂರ್ವಾಧ್ಯಕ್ಷ ಬುಡಾನ್ ಸಾಹೇಬ್, ಕಾರ್ಯದರ್ಶಿ ಸಂದೀಪ್ ಫಲಿಮಾರ್, ಸುಧಾಕರ ಕೆ, ಸಂತೋಷ್ ಪಡುಬಿದ್ರಿ, ಅಶ್ರಫ್ ಕಾಡಿಪಟ್ಣ, ಅಬ್ದುಲ್ ರಝಾಕ್, ಆದಶ್ ಫಲಿಮಾರ್, ರೋಹಿತ್ ಕೋಟ್ಯಾನ್, ಮನೋಜ್ ಕುಮಾರ್, ಪ್ರವೀಣ್ ಕಲ್ಲುರಾಯ ಉಪಸ್ಥಿತರಿದ್ದರು.