ಉದ್ಯೋಗ ಖಾತರಿ ಯೋಜನೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ಕುಂದಾಪುರ, ಅ.21: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರ ಪ್ರಮುಖ ಬೇಡಿಕೆ ಹಾಗೂ ಸಮರ್ಪಕ ನಿರ್ವಹಣೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಕುಂದಾಪುರ ತಾಪಂ ಕಛೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತು್ತ.
ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬರಗಾಲ ವ್ಯಾಪಿಸುತ್ತಿದೆ. ಬರ ಗಾಲದ ಪ್ರದೇಶದಲ್ಲಿ 100 ದಿನದ ಬದಲು 150 ದಿನಗಳ ಕೆಲಸವನ್ನು ಕೇಂದ್ರ ಸರಕಾರ ಘೋಷಿಸಿದರೆ ಆದರೆ ಇದಕ್ಕೆ ಬೇಕಾಗಿರುವ ಹೆಚ್ಚುವರಿ ಅನುದಾನ ವನ್ನು ಬಿಡುಗಡೆ ಮಾಡುತ್ತಿಲ್ಲ. ಆದ್ದರಿಂದ ರಾಜ್ಯಗಳಿಂದ ಬಂದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಅನುದಾನವನ್ನು ಬಿಡುಗಡೆಗೆ ಭರವಸೆ ನೀಡಿದರೂ ಕೇವಲ 2000 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಆದು ರಿಂದ ಕೇಂದ್ರ ಸರಕಾರ ನೀಡುವ ಅನುದಾನದ ಎರಡು ಪಟ್ಟು ಹೆಚ್ಚಿಸಬೇಕು. ಮತ್ತು ಪ್ರತಿ ವಷರ್ ಅದನ್ನು ಹೆಚ್ಚಿಸಬೇಕು ಎಂದರು.
ಪ್ರತಿಯೊಬ್ಬ ಅರ್ಜಿದಾರರನಿಗೂ 250 ದಿನಗಳ ಕಡ್ಡಾಯ ಕೆಲಸ ಕೊಡ ಬೇಕು. ದಿನಗೂಲಿ ರೂಪಾಯಿ 350ರೂ.ಗೆ ಹೆಚ್ಚಿಸಬೇಕು. ಯೋಜನೆಯಡಿ ಅರ್ಜಿ ಸಲ್ಲಿಸುವವರಿಗೆ ಆಧಾರ ಕಾರ್ಡು ಕಡ್ಡಾಯಗೊಳಿಸಿರುವುದನ್ನು ಹಿಂದಕ್ಕೆ ಪಡೆಯಬೇಕು. ಕೇರಳ ಮಾದರಿಯಲ್ಲಿ ನಗರ ಪ್ರದೇಶಗಳಿಗೂ ರಾಜ್ಯ ಸರಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ನಾಗರತ್ನ ನಾಡ, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಮುಖಂಡರಾದ ರಾಜೀವ ಪಡುಕೋಣೆ, ಮಹಾಬಲ ವಡೇರ ಹೋಬಳಿ, ಶ್ಯಾಮಲ ಗುಜ್ಜಾಡಿ, ಕಮಲ ಬಸ್ರೂರು, ಕುಶಲ ಹಂಗಳೂರು ಮೊದಲಾದ ವರು ಉಪಸ್ಥಿತರಿದ್ದರು.. ಬಳಿಕ ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.







