ಅ.22 ರಂದು ಕಥಾ ಸಂಕಲನ ಬಿಡುಗಡೆ
ಉಡುಪಿ, ಅ.21: ಅಡಪಾಡಿ ವಿಜೇಂದ್ರನಾಥ ಶೆಣೈ ಮತ್ತು ಮಕ್ಕಳು ಹಾಗೂ ರೋಟರಿ ಉಡುಪಿ ಇವರ ಆಶ್ರಯದಲ್ಲಿ ದಿ.ಮಾಯಾ ವಿ.ಶೆಣೈ ಅವರ ‘ನೆನಪೊಂದು... ಕಥೆ ಹಲವು’ ಕಥಾ ಸಂಕಲನ ಬಿಡುಗಡೆ ಸಮಾರಂಭವು ಅ.22 ರಂದು ಸಂಜೆ 5ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕೃತಿಯನ್ನು ಉಡುಪಿ ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್ ಬಿಡುಗಡೆಗೊಳಿಸಲಿರುವರು. ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಪ್ರೊ.ಮುರ ಳೀಧರ ಉಪಾಧ್ಯ ವಹಿಸಲಿರುವರು. ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕೃತಿ ಪರಿಚಯ ಮಾಡಲಿರುವರು ಎಂದು ಡಾ.ಕೆ.ಸುರೇಶ್ ಶೆಣೈ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಸಂಜೆ 6ಗಂಟೆಯಿಂದ ಸ್ಯಾಕ್ಸೋಫೋನ್ ವಾದನ, 6.30ರಿಂದ ಗಾಯನ ಕಾರ್ಯಕ್ರಮ ಜರಗಲಿದೆ. ಸುದ್ದಿಗೋಷ್ಠಿಯಲ್ಲಿ ವಿಜೇಂದ್ರನಾಥ ಶೆಣೈ, ಉಮೇಶ್ ನಾಯಕ್ ಉಪಸ್ಥಿತರಿದ್ದರು.
Next Story





