ಪರಿಸರವನ್ನು ಮಾಲಿನ್ಯ ಮುಕ್ತವನ್ನಾಗಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ನಾಗೇಶ

ಮುಂಡಗೋಡ, ಅ.22: ಸ್ವಚ್ಛ ಪರಿಸರವನ್ನು ಮಾಲಿನ್ಯ ಮುಕ್ತವನ್ನಾಗಿ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗೇಶ ಪಾಲನಕರ ಹೇಳಿದ್ದಾರೆ.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಬೆಳಗ್ಗೆ ಪಟ್ಟಣದ ಗಾಂಧಿನಗರದ ಶ್ರೀ ಮಳೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಭಾಗಗಳನ್ನು ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಇದರಿಂದ ಮಾತ್ರ ಸ್ವಸ್ಥ್ಯ ಯುಕ್ತ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮಳೆ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ರಾಕೇಶ ರಾಯ್ಕರ, ಸಾಹಿತಿ ಚಿದಾನಂದ ಕೋವಿ, ಕೃಷ್ಣಾ ಕಟ್ಟಿ, ಚೆನ್ನಬಸು, ಶಂಭಣ್ಣಾ ಕೊಳೂರ, ವಿನಯ ಪಾಲನಕರ, ಆರ್.ಜೆ.ಬೆಳ್ಳಣ್ಣನವರ, ತುಕಾರಾಮ ಸಾನು ಸೇರಿದಂತೆ ಕಸಾಪ ಸದಸ್ಯರು ಭಾಗವಹಿಸಿದ್ದರು.
Next Story





