ಸಂಚಾರ ನಿಯಮ ಉಲ್ಲಂಘನೆ: ವರ್ಷದಲ್ಲಿ 1 ಕೋಟಿ ಕೇಸು ದಾಖಲು
ಬೆಂಗಳೂರು, ಅ.22: ರಸ್ತೆ ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇಲೆ ಒಂದೇ ವರ್ಷದಲ್ಲಿ 1 ಕೋಟಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಸಾಲಿನ ಸೆಪ್ಟಂಬರ್ ತಿಂಗಳ ಅಂತ್ಯದ ವೇಳೆಗೆ 80,93,719 ಪ್ರಕರಣಗಳು ದಾಖಲಾಗಿದ್ದವು. 21ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ನಗರ ವ್ಯಾಪ್ತಿಯಲ್ಲಿ ಪ್ರತಿ ನಿಮಿಷಕ್ಕೆ ದಾಖಲಾಗುತ್ತಿವೆ. ದಶಕಗಳಲ್ಲೇ ಅತ್ಯಧಿಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಈ ವರ್ಷ ದಾಖಲಾಗಿವೆ ಎಂದು ಹೇಳಲಾಗುತ್ತಿದೆ.
ಒಂದು ಕೋಟಿ ಮೊಕದ್ದಮೆಗಳಲ್ಲಿ ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ ಪ್ರಕರಣಗಳೇ ಅಧಿಕವಾಗಿವೆ. 2015ರಲ್ಲಿ 76,26,671ಮೊಕದ್ದಮೆಗಳು ದಾಖಲಾಗಿತ್ತು. 2016ನೆ ಸಾಲಿನಲ್ಲಿ ಸಂಚಾರಿ ಪೊಲೀಸರು 1,80,438 ಮೊಕದ್ದಮೆ ದಾಖಲಿಸಿದ್ದರು. ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ, ವಾಹನ ನಿಲುಗಡೆ ಪ್ರಕರಣಗಳೇ ಹೆಚ್ಚಾಗಿದ್ದು, ಈ ವರ್ಷ 1.08ಕೋಟಿ ಸಂಚಾರಿ ನಿಯಮ ಉಲ್ಲಂಘನೆ ಮೊಕದ್ದಮೆಗಳನ್ನು ಸಂಚಾರಿ ಪೊಲೀಸರು ದಾಖಲಿಸಿದ್ದಾರೆ ಎನ್ನಲಾಗಿದೆ.
Next Story





