ಮಣ್ಣಿನಲ್ಲಿ ಬದುಕನ್ನು ಕಟ್ಟಿಕೊಳ್ಳುವ ವಿಫುಲ ಅವಕಾಶ: ಬಾಸುಮ ಕೊಡಗು

ಮಣಿಪಾಲ, ಅ.22: ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವ ನೀರು ಕೂಡ ಮಣ್ಣಿನ ಮೇಲೆ ಆಶ್ರಯ ಪಡೆದಿದೆ. ಮಕ್ಕಳು ಮಣ್ಣಿನಲ್ಲಿ ಆಟವಾಡುವು ದನ್ನು ಹಿರಿಯರು ಅಡ್ಡಿಪಡಿಸದೆ ಅದಕ್ಕೆ ಪ್ರೊತ್ಸಾಹಿಸಿ ಅವರು ಮಣ್ಣಿನ ಕಲಾವಿದ ರಾಗಿ ರೂಪುಗೊಳ್ಳಲು ಸಹಕರಿಸಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ಹೇಳಿದ್ದಾರೆ.
ಮಣಿಪಾಲದ ತ್ರಿವರ್ಣ ಆರ್ಟ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ‘ಕ್ಲೇ ಪ್ಲೇ’ ಆವೆ ಮಣ್ಣಿನ ಕಲಾಕೃತಿ ರಚನೆ ಕಾರ್ಯಾಗಾರವನ್ನು ಮಣ್ಣಿನ ಕಲಾಕೃತಿ ರಚಿಸುವ ಮೂಲಕ ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ಮಣ್ಣಿನ ಕಲಾಕೃತಿ ರಚನೆಯು ವ್ಯಾಪಕವಾಗಿ ವೃತ್ತಿಪರತೆಯನ್ನು ಬೆಳೆಸಿಕೊಂಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆಯನ್ನು ಗಳಿಸಿ ಕೊಂಡಿದೆ. ಮಣ್ಣು ಜಗತ್ತಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ವಿಪುಲವಾಗಿ ಸಿಗುವ ಅಪೂರ್ವ ವಸ್ತುವಾಗಿದೆ. ಆಸಕ್ತರಿಗೆ ಬದುಕನ್ನು ಕಟ್ಟಿಕೊಳ್ಳುವ ಸಾಕಷ್ಟು ಅವಕಾಶ ಗಳನ್ನು ಸೃಷ್ಟಿಸುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ಪಿ., ದೇವರಾಜ್ ನಾಯಕ್, ಸ್ಥಳೀಯ ರಾದ ಸತೀಶ್ ಎನ್. ಉಪಸ್ಥಿತರಿದ್ದರು. ತ್ರಿವರ್ಣ ಆರ್ಟ್ ಸೆಂಟರ್‌ನ ಸಂಚಾ ಲಕ ಹರೀಶ್ ಸಾಗ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.







