ಮದ್ಯದ ಅಮಲಿನಲ್ಲಿ ಆಂಬುಲೆನ್ಸ್ ಚಾಲನೆ: ಚಾಲಕ ವಶಕ್ಕೆ
ಬೆಂಗಳೂರು, ಅ.22: ಮದ್ಯದ ಅಮಲಿನಲ್ಲಿ ಸೈರನ್ ಹಾಕಿಕೊಂಡು ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಆರೋಪದ ಮೇಲೆ ಚಾಲಕನನ್ನು ಇಲ್ಲಿನ ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಮಲ್ಲೇಶ್ವರಂ ನಿವಾಸಿ ಅಯ್ಯಪ್ಪ (29) ಎಂಬಾತ ಆಂಬುಲೆನ್ಸ್ ಚಾಲಕ ಎಂದು ತಿಳಿದು ಬಂದಿದೆ.
ಶನಿವಾರ ರಾತ್ರಿ 11:30ರ ಸುಮಾರಿಗೆ ಚಾಲಕ ಅಯ್ಯಪ್ಪ ಆಂಬುಲೆನ್ಸ್‌ನಲ್ಲಿ ರೋಗಿಗಳಿಲ್ಲದಿದ್ದರೂ, ಸೈರನ್ ಹಾಕಿಕೊಂಡು ಮಲ್ಲೇಶ್ವರದಿಂದ ಕಾರ್ಪೊರೇಶನ್ ವೃತ್ತದ ಕಡೆಗೆ ಆಂಬುಲೆನ್ಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ರಾತ್ರಿ ಗಸ್ತಿನಲ್ಲಿದ್ದ ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ಸಂಶಯದ ಮೇಲೆ ನೃಪತುಂಗ ರಸ್ತೆಯಲ್ಲಿ ಆಂಬುಲೆನ್ಸ್‌ನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆಂಬುಲೆನ್ಸ್‌ನ್ನು ವಶಕ್ಕೆ ಪಡೆದು, ಚಾಲಕನಿಗೆ ಎಚ್ಚರಿಕೆ ನೀಡಿಕಳುಹಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





