ಕುತ್ಪಾಡಿ: ವಿಶ್ವ ಆಯುರ್ವೇದ ದಿನಾಚರಣೆ
ಉಡುಪಿ, ಅ.22: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಇತ್ತೀಚೆಗೆ ವಿಶ್ವ ಆಯುರ್ವೇದ ದಿನವನ್ನು ಆಚರಿಸಲಾಯಿತು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮ ಅಧ್ಯಕ್ಷತೆ ವಹಿಸಿ ದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ರೋಗ ನಿದಾನ ವಿಭಾಗದ ಉಪನ್ಯಾಸಕ ಡಾ.ಅರುಣ್ ಕುಮಾರ್ ಎಂ. ನೋವಿನ ಪ್ಯಾಥೋಪಿಜಿಯಾಲಜಿ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟ ನೋವು ನಿವಾರಕ ಜೌಷಧ ಗುಣವುಳ್ಳ ಸಸ್ಯಗಳನ್ನು ಸಂಸ್ಥೆಯ ಉಪನ್ಯಾಸಕರು, ವೈದ್ಯಾಧಿ ಕಾರಿಗಳು ಹಾಗೂ ವಿದ್ಯಾರ್ಥಿಗಳು ನೆಟ್ಟರು. ಪ್ರಬಂಧ ಸ್ಪರ್ಧೆಯ ವಿಜೇತರಾದ ಶಲ್ಯತಂತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ವೀಣಾ ವಿಜ ಯನ್ ಹಾಗೂ ಡಾ.ವಿನಾಯಕ ಮಾಲಿರವರಿಗೆ ಬಹುಮಾನವನ್ನು ವಿತರಿಸ ಲಾಯಿತು.
ಶಲ್ಯತಂತ್ರ ವಿಭಾಗ ಮುಖ್ಯಸ್ಥ ಡಾ.ಕೆ.ಆರ್.ರಾಮಚಂದ್ರ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿಯ ಸಹ ಮುಖ್ಯಸ್ಥೆ ಡಾ.ಮಮತಾ ಕೆ.ವಿ., ಆಸ್ಪತ್ರೆಯ ವ್ಯವಸ್ಥಾಪಕ ಸಿ.ಶ್ರೀನಿವಾಸ ಹೆಗ್ಡೆ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕಿ ಡಾ.ಚೈತ್ರಾ ಎಸ್. ೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.





