ರಸ್ತೆಯ ಮೇಲೆ ತುರ್ತು ಲ್ಯಾಂಡ್ ಆಯ್ತು ವಿಮಾನ!
ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಎದೆನಡುಗಿಸುವ ದೃಶ್ಯ

ಅಮೆರಿಕ, ಅ.22: ಜನನಿಬಿಡ ನಗರದ ರಸ್ತೆಯ ಮೇಲೆ, ನದಿಯ ಮೇಲೆ, ಸಮುದ್ರದ ಮೇಲೆ ವಿಮಾನ ಲ್ಯಾಂಡ್ ಆಗುವುದನ್ನು ಹಾಲಿವುಡ್ ಸಿನೆಮಾಗಳಲ್ಲಷ್ಟೇ ಸಾಧ್ಯವಾಗುತ್ತದೆ. ಆದರೆ ಅಮೆರಿಕದ ಫ್ಲೊರಿಡಾದ ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಸಿಕ್ಕ ವಿಡಿಯೋವೊಂದು ಎದೆಯಲ್ಲೊಮ್ಮೆ ನಡುಕ ಹುಟ್ಟಿಸುತ್ತದೆ. ಈ ದೃಶ್ಯಗಳು ಹಾಲಿವುಡ್ ಸಿನೆಮಾಗಳನ್ನೂ ಮೀರಿಸುವಂತಿದೆ.
ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಕಾಶದಲ್ಲಿ ಹಾರಾಡುತ್ತಿದ್ದ ಸಣ್ಣ ವಿಮಾನವೊಂದರಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಈ ಸಂದರ್ಭ ತುರ್ತು ಲ್ಯಾಂಡಿಂಗ್ ಮಾಡಬೇಕಾದ ಅನಿವಾರ್ಯತೆ ಎದುರಾದಾಗ ಪೈಲಟ್ ರಸ್ತೆಯಲ್ಲೇ ವಿಮಾನವನ್ನು ಇಳಿಸಿದ್ದಾನೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಸಮೀಪದಲ್ಲೇ ಇದ್ದ ಹೇರ್ ಸ್ಟುಡಿಯೋದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.
Next Story





