Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಈ ಬಾರಿಯೂ ತರಕಾರಿ ಕೊರತೆ: ಗ್ರಾಹಕರಲ್ಲಿ...

ಈ ಬಾರಿಯೂ ತರಕಾರಿ ಕೊರತೆ: ಗ್ರಾಹಕರಲ್ಲಿ ನಿರಾಸೆ

ಸಾವಯವ ಸಂತೆಯಲ್ಲಿ ತರಕಾರಿಗಿಂತ ಗ್ರಾಹಕರೇ ಅಧಿಕ!

ವಾರ್ತಾಭಾರತಿವಾರ್ತಾಭಾರತಿ22 Oct 2017 9:25 PM IST
share
ಈ ಬಾರಿಯೂ ತರಕಾರಿ ಕೊರತೆ: ಗ್ರಾಹಕರಲ್ಲಿ ನಿರಾಸೆ

ಉಡುಪಿ, ಅ. 22: ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕಾ ರೈತ ಸೇವಾ ಕೇಂದ್ರದಲ್ಲಿ ಪ್ರತಿ ರವಿವಾರ ನಡೆಯುವ ಉಡುಪಿ ಜಿಲ್ಲೆಯ ಮೊದಲ ಸಾವ ಯವ ಸಂತೆಯಲ್ಲಿ ಎರಡನೆ ವಾರ ಕೂಡ ತರಕಾರಿ ಕೊರತೆ ಎದುರಾಗಿದ್ದು, ಬಹುಬೇಗನೆ ತರಕಾರಿಗಳು ಖಾಲಿಯಾದ ಪರಿಣಾಮ ಸಾಕಷ್ಟು ಗ್ರಾಹಕರು ನಿರಾಸೆಯಿಂದ ಹಿಂತಿರುಗಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಬೆಳಗ್ಗೆ 8.30ಕ್ಕೆ ಆರಂಭಗೊಂಡ ಸಾವಯವ ಸಂತೆಯಲ್ಲಿ ಕೆಲವೇ ಗಂಟೆಗಳಲ್ಲಿ ಬಹುತೇಕ ತರಕಾರಿಗಳು ಖಾಲಿಯಾಗಿದ್ದವು.

ಕಳೆದ ವಾರದಂತೆ ಈ ವಾರವೂ ವ್ಯಾಪಾರದ ಭರಾಟೆ ಜೋರಾಗಿಯೇ ಕಂಡುಬಂತು.ಈ ವಾರ ಉಡುಪಿ ಜಿಲ್ಲೆಯಿಂದ 6.5 ಕ್ವಿಂಟಾಲ್ ತರಕಾರಿ, 3 ಜಿಲ್ಲೆಗಳ ನ್ನೊಳಗೊಂಡ ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟದಿಂದ 9 ಕ್ವಿಂಟಾಲ್ ಹಣ್ಣು ತರಾಕರಿಗಳು, 1 ಟನ್ 5 ಬಗೆಯ ಹಣ್ಣು ಹಂಪಲುಗಳು, 1.1ಟನ್ ಸಿರಿಧಾನ್ಯಗಳು ಹೀಗೆ ಒಟ್ಟು ಸುಮಾರು 3.5 ಟನ್‌ನಷ್ಟು ಹಣ್ಣು, ತರಕಾರಿ, ಸಿರಿಧಾನ್ಯಗಳನ್ನು ಸಂತೆಯಲ್ಲಿ ಮಾರಾಟಕ್ಕೆ ಇಟ್ಟಿದ್ದು, ಇದರಲ್ಲಿ ಬಹುತೇಕ ಮಾರಾಟವಾಗಿವೆ.

ಈ ವಾರ ಸುಮಾರು 600ರಿಂದ 700ಮಂದಿ ಗ್ರಾಹಕರು ಸಂತೆಗೆ ಆಗಮಿಸಿದ್ದರು.‘ಈ ಸಂತೆಯಲ್ಲಿ ಬಹುಬೇಗನೆ ತರಕಾರಿಗಳು ಮಾರಾಟವಾಗುತ್ತಿದ್ದು, ಇದ ರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದೆ ವ್ಯಾಪಾರಸ್ಥರು ತರಕಾರಿಗಳ ಬೆಲೆ ಹೆಚ್ಚಿಸಬಹುದು ಇಲ್ಲವೇ ಗ್ರಾಹಕರು ಇಲ್ಲಿ ತರಕಾರಿಗಳು ಸಿಗಲ್ಲ ಎಂದು ಬಾರದೆ ಇರಬಹುದು. ಅದೇ ರೀತಿ ರಜಾ ದಿನದಲ್ಲಿ ಸಂತೆ ಬಹುಬೇಗನೆ ಆರಂಭವಾಗುವುದರಿಂದಲೂ ಸಮಸ್ಯೆಯಾ ಗುತ್ತಿದೆ. ಆದುದರಿಂದ ಸ್ವಲ್ಪ ತಡವಾಗಿ ಸಂತೆ ಆರಂಭಿಸಿದರೆ ಗ್ರಾಹಕರಿಗೆ ಅನು ಕೂಲವಾಗಬಹುದು ಎಂದು ಉಡುಪಿಯ ಸುಧೀರ್ ಭಟ್ ಅಭಿಪ್ರಾಯ ಪಡುತ್ತಾರೆ.

ಬೈಂದೂರಿನ ಕೃಷಿಕ ಸುಧಾಕರ ನಾಯಕ್ ಸಂತೆಯ ಬಗ್ಗೆ ಪ್ರತಿಕ್ರಿಯಿಸಿ, ಬೈಂದೂರು, ಜಪ್ತಿಯಲ್ಲಿ ಬೆಳೆಸಿದ ಸುಮಾರು 9 ಕ್ವಿಂಟಾಲ್ ಹಣ್ಣು ತರಕಾರಿ ಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಆದರೆ ಬೇಗನೆ ಎಲ್ಲವೂ ಖಾಲಿ ಯಾಗಿದೆ. ಇದನ್ನು ನಾವು ನಿರೀಕ್ಷಿಸರಿಲಿಲ್ಲ ಎಂದು ತಿಳಿಸಿದರು.

ಬೆಳಗ್ಗೆ 10ಗಂಟೆಯ ಬಳಿಕ ಬಂದ ಗ್ರಾಹಕರು ಸಂತೆಯಲ್ಲಿ ಖಾಲಿಯಾದ ತರಕಾರಿಗಳನ್ನು ಕಂಡು ನಿರಾಸೆಯಿಂದ ಹಿಂತಿರುಗುತ್ತಿರುವುದು ಕಂಡುಬಂತು. ಸಂತೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಂತೋನಿ ಮರಿಯಾ ಇಮಾನ್ಯು ಯಲ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಪ್ರಾಂತೀಯ ಸಾವ ಯವ ಕೃಷಿಕರ ಸಂಘಗಳ ಒಕ್ಕೂಟದ ಅಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸುತ್ತಿದ್ದರು.

ಕರಾವಳಿ ಜಿಲ್ಲೆಗಳಲ್ಲಿ ಇನ್ನಷ್ಟೆ ತರಕಾರಿ ಸೀಸನ್ ಆರಂಭವಾಗಬೇಕಾಗಿದೆ. ಹಾಗಾಗಿ ಸಂತೆಯಲ್ಲಿ ತರಕಾರಿ ಕೊರತೆ ಎದುರಾಗಿದೆ. ಇದನ್ನು ಸರಿದೂಗಿಸಲು ಕೃಷಿ ಇಲಾಖೆಯು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯ ರೈತರಿಗೆ ಸಬ್ಸಿಡಿ ದರದಲ್ಲಿ ತರಕಾರಿ ಬೀಜಗಳನ್ನು ವಿತರಿಸಿ ತರಕಾರಿ ಬೆಳೆಸಲು ಉತ್ತೇಜನ ನೀಡಲಾಗುವುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಂತೋನಿ ಮರಿಯಾ ಇಮಾನ್ಯು ಯಲ್ ತಿಳಿಸಿದರು.

50 ಸಾವಿರ ತರಕಾರಿ ಗಿಡಗಳು: ಶಿವಳ್ಳಿ ತೋಟಗಾರಿಕಾ ರೈತ ಸೇವಾ ಕೇಂದ್ರದಲ್ಲಿ ಟ್ರೇಯಲ್ಲಿ ಕೋಕ್ ಫೀಡ್ ಗೊಬ್ಬರವನ್ನು ಹಾಕಿ ಬೆಳೆಸಲಾದ ಬೆಂಡೆಕಾಯಿ, ಬದನೆ, ಮೆಣಸಿನಕಾಯಿ ಒಂದು ಗಿಡಕ್ಕೆ ಒಂದು ರೂ. ನಂತೆ ಸಾವಯವ ಸಂತೆಯಲ್ಲಿ ಮಾರಾಟ ಮಾಡ ಲಾಗುತ್ತಿತ್ತು. ಒಟ್ಟು 50,000 ಗಿಡಗಳನ್ನು ಬೆಳೆಸಲಾಗಿದ್ದು, 20 ದಿನಗಳ ಈ ಗಿಡ ಮುಂದಿನ 40 ದಿನಗಳಲ್ಲಿ ಫಲ ನೀಡುತ್ತದೆ. ಕಳೆದ ವಾರದ ಸಂತೆಯಲ್ಲಿ 3,000 ಗಿಡಗಳನ್ನು ಮಾರಾಟ ಮಾಡಲಾಗಿದ್ದು, ಈ ವಾರವೂ ಸುಮಾರು 2,500 ದಷ್ಟು ಗಿಡಗಳು ಈಗಾಗಲೇ ಮಾರಾಟ ಆಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X