400 ಐಟಿಐಗಳನ್ನು ಅಧೀನದಿಂದ ಕೈಬಿಟ್ಟ ಕೇಂದ್ರ ಸರಕಾರ

ಹೊಸದಿಲ್ಲಿ, ಆ. 22: ಗುಣಮಟ್ಟ ಪರಿಶೀಲನೆ ಸಂದರ್ಭ ಅಗತ್ಯ ಮೂಲ ಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ಔದ್ಯೋಗಿಕ ತರಬೇತಿ ನೀಡುವಲ್ಲಿ ತರಬೇತುದಾರರ ಕೊರತೆ ಪತ್ತೆಯಾದ ಹಿನ್ನೆಲೆಯಲ್ಲಿ 400 ಐಟಿಐಗಳನ್ನು ಕೇಂದ್ರ ಸರಕಾರ ತನ್ನ ಅಧೀನದಿಂದ ಕೈಬಿಟ್ಟಿದೆ.
13,000 ಐಟಿಐಗಳಲ್ಲಿ ಸುಮಾರು 400 ಐಟಿಐಗಳನ್ನು ಅಧೀನದಿಂದ ಕೈಬಿಡಲಾಗಿದೆ ಎಂದು ಕೌಶಲ ಅಭಿವೃದ್ಧಿ ಹಾಗೂ ಉದ್ಯಮ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ಅಗರ್ ವಾಲ್ ಹೇಳಿದ್ದಾರೆ.
ಈ ಐಟಿಐಗಳನ್ನು ನಾವು ಪರಿಶೀಲನೆ ನಡೆಸಿದ್ದೇವೆ. ಮಾರ್ಗಸೂಚಿಯಂತೆ ಈ ಐಟಿಐಗಳಲ್ಲಿ ಮೂಲ ಸೌಕರ್ಯ ಹಾಗೂ ತರಬೇತುದಾರರ ಗುಣಮಟ್ಟ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಗುಣಮಟ್ಟ ನಿರ್ವಹಿಸುವ ಹಿನ್ನೆಲೆಯಲ್ಲಿ ಐಟಿಐಗಳ ಬಗ್ಗೆ ನಿಗಾ ವಹಿಸಲಾ ಕೌಶಲ ಅಭಿವೃದ್ಧಿ ಸಚಿವಾಲಯ ಕಾರ್ಯಾರಂಭಿಸಿದೆ ಹಾಗೂ ಸಂಸ್ಥೆಗಳಿಂದ ಸ್ವಯಂಪ್ರೇರಿತ ಶ್ರೇಣಿ ನೀಡುವ ಕ್ರಮವನ್ನು ಕೂಡ ಪರಿಚಯಿಸಿದೆ ಎಂದು ರಾಜೇಶ್ ಅಗರ್‌ವಾಲ್ ಹೇಳಿದ್ದಾರೆ.
Next Story





