Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ರಖ್ಖಾ ನಗರವನ್ನು ಭೂಮಿಯಿಂದ ಅಳಿಸಿದ...

ರಖ್ಖಾ ನಗರವನ್ನು ಭೂಮಿಯಿಂದ ಅಳಿಸಿದ ಅಮೆರಿಕ: ರಶ್ಯ ಆಕ್ರೋಶ

ಅಮೆರಿಕ ಮೈತ್ರಿಪಡೆ ದಾಳಿಯಿಂದ ಇಡೀ ನಗರ ನೆಲಸಮ

ವಾರ್ತಾಭಾರತಿವಾರ್ತಾಭಾರತಿ22 Oct 2017 11:11 PM IST
share
ರಖ್ಖಾ ನಗರವನ್ನು ಭೂಮಿಯಿಂದ ಅಳಿಸಿದ ಅಮೆರಿಕ: ರಶ್ಯ ಆಕ್ರೋಶ

ಮಾಸ್ಕೊ,ಅ.22: ಅಂತರ್ಯುದ್ಧದಿಂದ ಜರ್ಝರಿತವಾಗಿರುವ ಸಿರಿಯದಲ್ಲಿ ಐಸಿಸ್ ವಿರುದ್ಧದ ಸಮರದಲ್ಲಿ ಅಮೆರಿಕ ನೇತೃತ್ವದ ಮೈತ್ರಿ ಪಡೆಗಳು ಇಡೀ ರಖ್ಖಾ ನಗರವನ್ನೇ ಭೂಮಿಯಿಂದ ಅಳಿಸಿ ಹಾಕಿದೆ ಎಂದು ರಶ್ಯವು ಆಕ್ರೋಶ ವ್ಯಕ್ತಪಡಿಸಿದೆ.

 ಕಳೆದವಾರ ಅಮೆರಿಕ ಮೈತ್ರಿಪಡೆ ಬೆಂಬಲಿತ ಸಿರಿಯನ್ ಡೆಮಾಕ್ರಾಟಿಕ್ ಪಡೆಗಳು ರಖ್ಖಾ ನಗರವನ್ನು ವಶಪಡಿಸಿಕೊಂಡಿದ್ದವು ಹಾಗೂ ಅಲ್ಲಿರುವ ಸಿರಿಯದ ಅತಿ ದೊಡ್ಡ ತೈಲಕ್ಷೇತ್ರವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಅವು ಹೇಳಿದ್ದವು.

ಅಮೆರಿಕ ನೇತೃತ್ವದ ಮಿತ್ರ ಪಡೆಗಳ ದಾಳಿಯಿಂದಾಗಿ ರಖ್ಖಾ ನಗರವು ಪಾಳು ಬಿದ್ದಿದ್ದು, ಇದು ಎರಡನೆ ಜಾಗತಿಕ ಯುದ್ಧದಲ್ಲಿ ಜರ್ಮನಿಯ ನಗರ ಡ್ರೆಸ್ಡನ್‌ನ ವಿನಾಶಕ್ಕೆ ಸಮನಾಗಿದೆಯೆಂದು ರಶ್ಯದ ಸೇನಾ ವಕ್ತಾರರೊಬ್ಬರು ರವಿವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ 1945ರಲ್ಲಿ ಡ್ರೆಸ್ಡೆನ್ ನಗರಕ್ಕೆ ಆದ ದುರ್ಗತಿಯೇ ರಖ್ಖಾ ನಗರಕ್ಕೂ ಬಳವಳಿಯಾಗಿ ದೊರೆತಿದೆ. ಅಮೆರಿಕನ್ ಮೈತ್ರಿಪಡೆಗಳ ಭಯಾನಕ ಬಾಂಬ್ ದಾಳಿಯು ಇಡೀ ರಖ್ಖಾ ನಗರವೇ ಭೂಮಿಯಿಂದ ಅಳಿಸಿ ಹಾಕಿದೆ’’ ಎಂದು ಮೇಜರ್ ಜನರಲ್ ಇಗೊರ್ ಕೊನಾಶೆನ್‌ಕೊವ್ ತಿಳಿಸಿದ್ದಾರೆ.

ತಾನು ಎಸಗಿದ ಅಪರಾಧಗಳ ಪುರಾವೆಗಳನ್ನು ಮರೆಮಾಚುವುದಕ್ಕಾಗಿ ಪಾಶ್ಚಾತ್ಯ ದೇಶಗಳು ಹಣಕಾಸು ನೆರವನ್ನು ರಖ್ಖಾಗೆ ರವಾನಿಸುವ ಧಾವಂತದಲ್ಲಿವೆಯೆಂದು ಅವರು ಟೀಕಿಸಿದ್ದಾರೆ.

ಆದರೆ ರಶ್ಯದ ಆರೋಪವನ್ನು ಅಮೆರಿಕವು ನಿರಾಕರಿಸಿದೆ. ರಖ್ಖಾದಲ್ಲಿ ಶತ್ರುನೆಲೆಗಳನ್ನು ಗುರಿಯಿರಿಸಿ ದಾಳಿ ನಡೆಸುವಾಗ ನಾಗರಿಕರಿಗೆ ಹಾನಿಯಾಗುವುದನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಅನುಸರಿಸಿರುವುದಾಗಿ ಅದು ಹೇಳಿದೆ.

  ರಖ್ಖಾ ನಗರವನ್ನು ಐಸಿಸ್‌ನಿಂದ ಸ್ವಾಧೀನಪಡಿಸಿಕೊಳ್ಳಲು ನಾಲ್ಕು ತಿಂಗಳ ಕಾಲ ನಡೆಸಿದ ಹೋರಾಟದಲ್ಲಿ ತಾನು ಜಯಗಳಿಸಿರುವುದಾಗಿ ಅಮೆರಿಕ ಮೈತ್ರಿಪಡೆಗಳ ಬೆಂಬಲ ಹೊಂದಿರುವ ಎಸ್‌ಡಿಎಫ್ ಕಳೆದ ವಾರ ಘೋಷಿಸಿತ್ತು. ಐಸಿಸ್ ಉಗ್ರರ ಮುಖ್ಯ ಆದಾಯ ಮೂಲವಾಗಿದ್ದ ಅಲ್-ಉಮರ್ ತೈಲಕ್ಷೇತ್ರವನ್ನು ಕೂಡಾ ತಾನು ವಶಪಡಿಸಿರುವುದಾಗಿ ಅದು ಹೇಳಿದೆ.ಎಸ್‌ಡಿಎಫ್ ಖುರ್ದಿಷ್ ಹಾಗೂ ಅರಬ್ ಬಂಡುಕೋರರ ಮೈತ್ರಿಕೂಟವಾಗಿದೆ.

ಇದೀಗ ಅಮೆರಿಕನ್ ಮೈತ್ರಿಪಡೆಗಳು ಸಿರಿಯದ ಪೂರ್ವ ಪ್ರಾಂತವಾದ ದೇರ್ ಅರೆರ್‌ನಲ್ಲಿ ಐಸಿಸ್ ವಿರುದ್ಧ ಕಾಳಗದಲ್ಲಿ ತೊಡಗಿವೆ.

ಇನ್ನೊಂದೆಡೆ ರಶ್ಯದ ವಾಯುಪಡೆಗಳ ಬೆಂಬಲದೊಂದಿಗೆ ಸಿರಿಯದ ಸೇನೆ ಹಾಗೂ ಇರಾನಿ ಬಂಡುಕೋರರು ಪ್ರತ್ಯೇಕವಾಗಿ ಐಸಿಸ್ ವಿರುದ್ಧ ಕಾಳಗಗದಲ್ಲಿ ನಿರತವಾಗಿವೆ.

ಎಸ್‌ಡಿಎಫ್ ಪಡೆಗಳಿಗೆ ಬೆಂಬಲವಾಗಿ ಅಮೆರಿಕ ನೇತೃತ್ವದಲ್ಲಿ ನಡೆದ ವಾಯುದಾಳಿಯಲ್ಲಿ ಸುಮಾರು 1873 ನಾಗರಿಕರು ಸಾವನ್ನಪ್ಪಿರುವುದಾಗಿ ಸಿರಿಯಾದ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X