ಗಾಂಜಾ ಸೇವನೆ: ಆರೋಪಿಗಳು ವಶ
ಉಡುಪಿ, ಅ.23: ಅಂಬಾಗಿಲು ಬಳಿ ಶನಿವಾರ ಸಂಜೆ ಗಾಂಜಾ ಸೇವನೆ ಮಾಡುತ್ತಿದ್ದರು ಎಂದು ಆರೋಪಿಸಿ ಸಹೋದರರಾದ ಸಂತೆಕಟ್ಟೆ ನಯಂಪಳ್ಳಿಯ ಗ್ಲಾಡಿನ್ ಡಿಸೋಜ(21) ಹಾಗೂ ಗಾಡ್ವಿನ್ ಡಿಸೋಜ(24) ಎಂಬವರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇವರನ್ನು ಮಣಿಪಾಲ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅ.23ರಂದು ಬಂದ ತಜ್ಞರ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story