ಸೂರಿಂಜೆ ಜುಮಾ ಮಸೀದಿಯ ಆಡಳಿತ ಕಮಿಟಿಗೆ ಆಯ್ಕೆ
ಮಂಗಳೂರು, ಅ.23: ರಾಜ್ಯ ವಕ್ಫ್ ಸಂಸ್ಥೆಯ ಸೂಚನೆಯಂತೆ ಸೂರಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಗೆ ಆ.15ರಂದು ನಡೆದ ಚುನಾವಣೆಯಲ್ಲಿ 11 ಮಂದಿ ಆಯ್ಕೆಯಾಗಿದ್ದಾರೆ. ಈ 11 ಮಂದಿಯನ್ನೊಳಗೊಂಡ ಸಮಿತಿಯಲ್ಲಿ ಪದಾಧಿಕಾರಿಗಳ ಆಯ್ಕೆಯಾಗಿ ಅ.22ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಉಸ್ಮಾನ್ ಅಬ್ದುಲ್ಲಾ, ಉಪಾಧ್ಯಕ್ಷರಾಗಿ ಕೆ.ಎಚ್. ಮುಹಮ್ಮದ್, ಕಾರ್ಯದರ್ಶಿಯಾಗಿ ಕೆ.ಎ.ಲಿಯಾಕತ್ ಅಲಿ, ಕೋಶಾಧಿಕಾರಿಯಾಗಿ ಎಸ್.ಎಂ. ಹಮೀದ್, ಸದಸ್ಯರಾಗಿ ಹನೀಫ್ ಪಂಜ, ಎಂ.ಬಿ. ಮಲಿಕ್, ಟಿ. ಸೈಯದ್, ಎಸ್.ಎ.ರಝಾಕ್, ಮುಹಮ್ಮದ್ ಶರೀಫ್, ಕೆ.ಬಿ. ಹಸನಬ್ಬ, ಜಲೀಲ್ ಮುಂದಿನ 3 ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.
ನಿವೃತ್ತ ಎಸ್ಸೈ ವಿ. ಮುಹಮ್ಮದ್ ಚುನಾವಣೆ ನಡೆಸಿಕೊಟ್ಟಿದ್ದು, ಮಸೀದಿಯ ಆಡಳಿತಾಧಿಕಾರಿಯಾಗಿದ್ದ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು.
Next Story