ಜಿಎಸ್‌ಟಿಯಿಂದ ಔಷಧಗಳ ಬೆಲೆ ಏರಿಕೆ: ಆರೋಪ
ಮಂಗಳೂರು, ಅ.23: ಕೇಂದ್ರ ಸರಕಾರವು ಜಾರಿಗೆ ತಂದಿರುವ ಜಿಎಸ್‌ಟಿಯಿಂದ ಔಷಧಗಳ ಬೆಲೆ ಏರಿಕೆಯಾಗಿದೆ ಎಂದು ದ.ಕ.ಜಿಲ್ಲಾ ಕ್ರೀಡಾಭಿವೃದ್ಧಿ ಮತ್ತು ಮಂಗಳಾ ಕ್ರೀಡಾಂಗಣದ ನಿರ್ದೇಶಕ ಸಾಜಿದ್ ಉಳ್ಳಾಲ್ ಆರೋಪಿಸಿದ್ದಾರೆ.
ಔಷಧಗಳಿಗಿದ್ದ ಶೇ.5 ತೆರಿಗೆಯನ್ನು ಶೇ.12ಕ್ಕೇರಿಸಲಾಗಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಿಡ್ನಿ ತೊಂದರೆ ಇತ್ಯಾದಿ ರೋಗದಿಂದ ಬಳಲುವವರಿಗೆ ತೊಂದರೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





