ಅಳೇಕಲ ಎಸ್ಬಿಎಸ್ಗೆ ಆಯ್ಕೆ
ಮಂಗಳೂರು, ಅ.23: ಸುನ್ನಿ ಬಾಲ ಸಂಘ (ಎಸ್ಬಿಎಸ್) ಅಳೇಕಲ ಶಾಖೆಯ ನೂತನ ಸಮಿತಿ ರಚನಾ ಸಭೆಯು ಅಳೇಕಲದ ಸುನ್ನಿ ಸೆಂಟರ್ನಲ್ಲಿ ನಡೆಯಿತು.
ಸೈಯದ್ ಫಹಾಝ್ ತಂಙಳ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್ಬಿಎಸ್ ಸಂಚಾಲಕ ಶಫೀಖ್ ಯು.ಎಸ್. ಸಭೆ ಉದ್ಘಾಟಿಸಿದರು. ಸಭೆಯಲ್ಲಿ 2017-18ನೆ ಸಾಲಿನ ಅಧ್ಯಕ್ಷರಾಗಿ ಅರ್ಮಾನ್ ಮುಹಮ್ಮದ್, ಉಪಾಧ್ಯಕ್ಷರಾಗಿ ಸೈಯದ್ ಫಹಾಝ್ ತಂಙಳ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಯಾಸಿರ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ನಯೀಮ್, ಮುಖ್ತಾರ್ ಎ.ಎಸ್, ಕೋಶಾಧಿಕಾರಿಯಾಗಿ ಮುಹಮ್ಮದ್ ಆಯ್ಕೆಯಾದರು.
Next Story