‘ಮಹಾಕಳ್ಳ’ ಬಿಜೆಪಿಯನ್ನು ಸೋಲಿಸಲು ‘ಕಳ್ಳ’ ಕಾಂಗ್ರೆಸನ್ನು ಬೆಂಬಲಿಸಬಹುದು: ಹಾರ್ದಿಕ್ ಪಟೇಲ್

ಗುಜರಾತ್, ಅ.24: ಮುಂಬರುವ ಗುಜರಾತ್ ಚುನಾವಣೆಯಲ್ಲಿ ‘ಮಹಾಕಳ್ಳ’ ಬಿಜೆಪಿಯನ್ನು ಸೋಲಿಸಲು ‘ಕಳ್ಳ’ ಕಾಂಗ್ರೆಸನ್ನು ಬೆಂಬಲಿಸಬಹುದು ಎಂದು ಪಾಟಿದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
“ಆದರೆ ತಾಳ್ಮೆಯಿರಲಿ. ಈಗಲೇ ಕಾಂಗ್ರೆಸನ್ನು ಬೆಂಬಲಿಸಬೇಡಿ” ಎಂದವರು ಹೇಳಿದ್ದಾರೆ.
ಉತ್ತರ ಗುಜರಾತಿನ ಮಂದಾಲ್ ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಹ್ಮದಾಬಾದ್ ನ ವಿಲಾಸಿ ಹೋಟೆಲ್ ನಲ್ಲಿ ತಾನು ಇದ್ದಾಗ ರಾಹುಲ್ ಗಾಂಧಿ ಕೂಡ ಅಲ್ಲಿಗೆ ಆಗಮಿಸಿದ್ದರು. ಆದರೆ ಇಬ್ಬರೂ ಭೇಟಿಯಾಗಿಲ್ಲ ಎಂದವರು ಸ್ಪಷ್ಟಪಡಿಸಿದರು.
“ಕಾಂಗ್ರೆಸ್ ನ ಆಹ್ವಾನದಂತೆ ನಾನು ಹೋಟೆಲ್ ಗೆ ತೆರಳಿದ್ದೆ. ನಾನು ಅಲ್ಲಿ ಕಾಂಗ್ರೆಸ್ ಗುಜರಾತ್ ಉಸ್ತುವಾರಿ ಗೆಹ್ಲೋಟ್ ರನ್ನು ಭೇಟಿಯಾದೆ. ತುಂಬಾ ತಡವಾಗಿದ್ದರಿಂದ ನಾನು ಹೋಟೆಲ್ ನಲ್ಲಿ ಉಳಿಯಲು ನಿರ್ಧರಿಸಿದೆ. ಆದರೆ ಬಿಜೆಪಿಯವರಿಗೆ ಲೀಕ್ ಆದ ಸಿಸಿಕ್ಯಾಮರಾ ದೃಶ್ಯಗಳು ಲಭಿಸಿತ್ತು. ಏಕೆಂದರೆ ಗುಜರಾತ್ ನಲ್ಲಿರುವ ಎಲ್ಲವೂ ಬಿಜೆಪಿಯ ಆಸ್ತಿಯಾಗಿದೆ” ಎಂದವರು ಹೇಳಿದರು.
Next Story





