ಉಡುಪಿ: 28ಕ್ಕೆ ಆರ್‌ಟಿಎ ಸಭೆ
ಉಡುಪಿ, ಅ.24: ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯು ಅ.28ರಂದು ಬೆಳಗ್ಗೆ 10:30ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆಯಲಿದೆ.
ಇದರಲ್ಲಿ ಹಿಂದಿನ ಸಭೆಯಲ್ಲಿ ಮುಂದೂಡಿದ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಸಂಬಂಧಿತ ಅರ್ಜಿದಾರರು ಮತ್ತು ಅವರ ಪ್ರತಿನಿಧಿ ಗಳು ಸಭೆಯಲ್ಲಿ ಭಾಗವಹಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಬಾರ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





