ವಿಶ್ವ ಬ್ರಾಹ್ಮಣ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಉಡುಪಿ, ಅ. 24: 2017-18 ಶೈಕ್ಷಣಿಕ ವರ್ಷದಲ್ಲಿ ಈ ಕೆಳಗಿನ ಕೋರ್ಸು ಗಳ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ಮತ್ತು ಲ್ಯಾಟರಲ್ ಎಂಟ್ರಿ ನಿಯಮ ದಂತೆ ದ್ವಿತೀಯ ಡಿಪ್ಲೊಮಾ ಮತ್ತು ದ್ವಿತೀಯ ಬಿ.ಇ. ಕೋರ್ಸುಗಳಿಗೆ ಸೇರಿ ರುವ ಉಡುಪಿ ಜಿಲ್ಲೆಯ ವಿಶ್ವ ಬ್ರಾಹ್ಮಣ ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪಾಲಿಟೆಕ್ನಿಕ್ ಡಿಪ್ಲೊಮ, ನರ್ಸಿಂಗ್ ಡಿಪ್ಲೊಮ ಚಿತ್ರಕಲಾ ಡಿಪ್ಲೊಮ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಡಿಪ್ಲೊಮ, ಎಜ್ಯುಕೇಶನಲ್ ಡಿಪ್ಲೊಮ, ಬಿಎಸ್‌ಡಬ್ಲ್ಯೂ, ಬಿಎಸ್‌ಸಿ(ನರ್ಸಿಂಗ್ ಮತ್ತು ಲ್ಯಾಬ್ ಟೆಕ್ನಾಲಜಿ) ಬಿಎಡ್, ಲೆಕ್ಕಪರಿಶೋಧನೆ ಸಂಸ್ಕೃತ-ವೇದವಿದ್ವತ್, ಆಯುರ್ವೇದ ಮೆಡಿಸಿನ್, ಸ್ನಾತ ಕೋತ್ತರ ಪದವಿ(ಎಂಎ, ಎಂಕಾಂ, ಎಂಎಸ್‌ಸಿ, ಎಂಬಿಎ, ಎಂಸಿಎ, ಎಂಎಸ್ ಡಬ್ಲ್ಯೂ), ಎಂಜಿನಿಯರಿಂಗ್ ಪದವಿ(ಬಿಇ ಬಿಟೆಕ್, ಬಿಆರ್ಚ್, ಎಂಟೆಕ್), ಪಿಸಿಯೋತೆರಫಿ, ಆಯುರ್ವೇದಿಕ್ ಮೆಡಿಸಿನ್ (ಬಿಎಎಂಎಸ್), ಮೆಡಿಕಲ್ (ಎಂಬಿಬಿಎಸ್), ಡೆಂಟಲ್(ಬಿಡಿಎಸ್) ಕೋರ್ಸ್‌ಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಎ4 ಗಾತ್ರದ ಬಿಳಿ ಹಾಳೆಯಲ್ಲಿ ಕ್ರಮ ಪ್ರಕಾರ ಅರ್ಜಿ ಬರೆದು, ಸಂಪರ್ಕ ದೂರವಾಣಿ, ಮೊಬೈಲ್, ಇ-ಮೈಲ್ ನಮೂದಿಸಿ, ರೇಶನ್ ಕಾರ್ಡ್‌ನ ಪ್ರತಿ, ಗತಪರೀಕ್ಷೆಯ ಅಂಕಪಟ್ಟಿ ಪ್ರತಿ, ಈ ವರ್ಷ ವ್ಯಾಸಾಂಗ ಮಾಡುತ್ತಿರುವ ದಾಖಲೆ, ಸಮಾಜದ ದೇವಸ್ಥಾನದ ಮೊಕ್ತೇಸರರ/ಟ್ರಸ್ಟ್‌ನ ಪೋಷಕರ ದೃಡೀಕರಣದೊಂದಿಗೆ(ಸೀಲು ಇರಬೇಕು) ನ.1ರಿಂದ ನ.10ರ ನಡುವೆ ತಲಪುವಂತೆ ಅಂಚೆಯಲ್ಲಿ ಕಳುಹಿಸಬೇಕು.
ನ.19ರಂದು ಪೂರ್ವಾಹ್ನ 9:30ರ ಮೊದಲು ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಹಾಜರಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಅದೇ ದಿನ ಮಧ್ಯಾಹ್ನ 1ಗಂಟೆ ಮೊದಲು ವಿದ್ಯಾರ್ಥಿ ವೇತನ ನೀಡಿಕೆ ಪತ್ರ ನೀಡಲಾಗುವುದು.
ನ.21ರಂದು ವಿದ್ಯಾರ್ಥಿ ವೇತನ ವಿತರಿಸ ಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಸಂತ ಆಚಾರ್ಯ ಕಾರ್ಕಳ(94800 55512), ಬಿ.ಎ.ಆಚಾರ್ಯ ಮಣಿಪಾಲ(9945542549), ಡಾ.ದಾಸ ಆಚಾರ್ಯ ಹೇರೂರು(9886449656) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.







