ಮಕ್ಕಾ ಮಸೀದಿಯ ಅವಹೇಳನ ಪ್ರಕರಣ: ಕಡಬ ಠಾಣೆಗೆ ಶರಣಾದ ಆರೋಪಿ ಪ್ರದೀಪ್

ಕಡಬ, ಅ.24. ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕಡಬದ ಮೊಬೈಲ್ ಸೆಂಟರ್ ನೌಕರ ಪ್ರದೀಪ್ ಕಡಬ ಠಾಣೆಗೆ ಶರಣಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪ್ರದೀಪ್ ಕಾಬಾದ ಫೊಟೋವನ್ನು ತಿರುಚಿ ತನ್ನ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೊವನ್ನಾಗಿ ಉಪಯೋಗಿಸಿ ಮಕ್ಕಾವನ್ನು ಅವಮಾನಿಸುವ ಕೃತ್ಯವನ್ನು ಮಾಡಿದ್ದಲ್ಲದೆ ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಹೀನ ಕೃತ್ಯವನ್ನು ಎಸಗಲಾಗಿದೆ ಎಂದು ದೂರು ದಾಖಲಾಗಿತ್ತು. ಈತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳ ಬೇಕೆಂದು ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಕಡಬದಲ್ಲಿ ಮೌನ ಪ್ರತಿಭಟನೆ ನಡೆದಿತ್ತು.
Next Story





