2 ಲಕ್ಷ ರೊಹಿಂಗ್ಯಾ ಮಕ್ಕಳಿಗಾಗಿ ಮರುಗಿದ ಪೋಪ್

ವ್ಯಾಟಿಕನ್ ಸಿಟಿ, ಅ. 24: ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ನರಳುತ್ತಿರುವ ಸುಮಾರು 2 ಲಕ್ಷ ರೊಹಿಂಗ್ಯಾ ಮಕ್ಕಳಿಗಾಗಿ ಪೋಪ್ ಫ್ರಾನ್ಸಿಸ್ ಸೋಮವಾರ ಮರುಕ ವ್ಯಕ್ತಪಡಿಸಿದ್ದಾರೆ.
ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳಿಗೆ ಭೇಟಿ ನೀಡುವ ತಿಂಗಳ ಮುನ್ನ ಕ್ರೈಸ್ತ ಪರಮೋಚ್ಛ ಗುರು ರೊಹಿಂಗ್ಯಾ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದಾರೆ.
‘‘2 ಲಕ್ಷ ರೊಹಿಂಗ್ಯಾ ಮಕ್ಕಳು ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಅವರಿಗೆ ಆಹಾರದ ಹಕ್ಕು ಇದ್ದರೂ, ತಿನ್ನಲು ಸಾಕಷ್ಟು ಸಿಗುತ್ತಿಲ್ಲ. ಅವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಅವರಿಗೆ ಔಷಧಿಗಳು ಸಿಗುತ್ತಿಲ್ಲ’’ ಎಂದು ಪೋಪ್ ಹೇಳಿದ್ದಾರೆ.
ನವೆಂಬರ್ ಕೊನೆಯಲ್ಲಿ ಪೋಪ್ ಬೌದ್ಧ ಬಾಹುಳ್ಯದ ಮ್ಯಾನ್ಮಾರ್‌ಗೆ ಭೇಟಿ ನೀಡಲಿದ್ದಾರೆ. ಬಳಿಕ, ಅವರು ಬಾಂಗ್ಲಾದೇಶಕ್ಕೆ ಹೋಗಲಿದ್ದಾರೆ.
Next Story





