ಯವತಿ ಮೇಲೆ ಅತ್ಯಾಚಾರ: ಆರೋಪಿಗೆ 12 ವರ್ಷ ಜೈಲು ಸಜೆ
ಮೈಸೂರು, ಅ.24: ಅತ್ಯಾಚಾರಿ ಆರೋಪಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ ಮೈಸೂರಿನ 7ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕೆ.ಎಂ ಅಭಿಷೇಕ್ (21) ಶಿಕ್ಷೆಗೆ ಗುರಿಯಾದ ಯುವಕ. 2014ರಲ್ಲಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಯುವತಿ ಮೇಲೆ ಅಭಿಷೇಕ್ ಅತ್ಯಾಚಾರವೆಸಗಿದ್ದ. ಅಭಿಷೇಕ್ ನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಅಭಿಷೇಕ್ ಗೆ ಶಿಕ್ಷೆ ಹಾಗೂ 17,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಮಹಂತಪ್ಪ ವಾದ ಮಂಡಿಸಿದ್ದರು.
Next Story





