ರಾಜಸ್ತಾನ: ಶಾಲೆಗೆ ಬಾಂಬ್ ಬೆದರಿಕೆ

ಜೈಪುರ, ಆ. 24: “ಖಾಸಗಿ ಶಾಲೆಯೊಂದರಲ್ಲಿ ಹಲವು ಬಾಂಬ್‌ಗಳನ್ನು ಇರಿಸಲಾಗಿದೆ. ಈ ಬಾಂಬ್‌ಗಳು 12 ಗಂಟೆಗೆ ಸ್ಫೋಟಗೊಳ್ಳಲಿವೆ” ಎಂಬ ಇ ಮೇಲ್ ಬಂದ ಹಿನ್ನೆಲೆಯಲ್ಲಿ ಶಾಲೆಯೊಂದರಲ್ಲಿ ಆತಂಕದ ವಾತಾವರಣ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆ ಬೆಳಗ್ಗೆ ಇಮೇಲ್ ಸ್ವೀಕರಿಸಿತು. ಇದರಿಂದ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಆತಂಕಿತರಾದರು. ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತು ಎಂದು ಡಿಸಿಪಿ (ಪಶ್ಚಿಮ) ಅಶೋಕ್ ಗುಪ್ತಾ ಹೇಳಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ ಹಾಗೂ ತುರ್ತು ಸ್ಪಂದನಾ ತಂಡ ತಕ್ಷಣ ಶಾಲೆಗೆ ಆಗಮಿಸಿತು. ಕಟ್ಟಡವನ್ನು ತೆರವುಗೊಳಿಸಿ ಪರಿಶೀಲನೆ ನಡೆಸಿತು ಎಂದು ಗುಪ್ತಾ ತಿಳಿಸಿದ್ದಾರೆ. “ಮೇಲ್ನೋಟಕ್ಕೆ ಇದೊಂದು ಹುಸಿ ಕರೆ. ನಾವು ಶಾಲಾ ಅವರಣ ತೆರವುಗೊಳಿಸಿದ್ದೇವೆ. ಪರಿಶೀಲನಾ ವೇಳೆ ಅನುಮಾನಾಸ್ಪದವಾದ ಯಾವುದೇ ವಸ್ತು ಕಂಡು ಬಂದಿಲ್ಲ. ಇಮೇಲ್ ಬಂದ ವಿಳಾಸ ಪತ್ತೆ ಹಚ್ಚಲು ನಾವು ಕಾರ್ಯ ಪ್ರವೃತ್ತರಾಗಿದ್ದೇವೆ” ಎಂದು ಡಿಜಿಪಿ ಗುಪ್ತಾ ಹೇಳಿದರು.
Next Story





