ಯುದ್ಧಾಪರಾಧ ವಿರುದ್ಧ ತನಿಖೆ ತ್ವರಿಗೊಳಿಸಿ: ಲಂಕಾಗೆ ವಿಶ್ವಸಂಸ್ಥೆ ತಾಕೀತು

ಕೊಲಂಬೊ, ಅ. 24: ಆಂತರಿಕ ಯುದ್ಧದ ಸಮಯದಲ್ಲಿ ಸೈನಿಕರು ತಮಿಳರ ವಿರುದ್ಧ ನಡೆಸಿದ್ದಾರೆನ್ನಲಾದ ಯುದ್ಧಾಪರಾಧಗಳ ಬಗ್ಗೆ ತಾನು ನಡೆಸುತ್ತಿರುವ ತನಿಖೆಯನ್ನು ಕ್ಷಿಪ್ರಗೊಳಿಸಲು ಶ್ರೀಲಂಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇಲ್ಲವೇ ಅಂತಾರಾಷ್ಟ್ರೀಯ ಸಮುದಾಯ ತೆಗೆದುಕೊಳ್ಳುವ ಕ್ರಮಗಳನ್ನು ಎದುರಿಸಬೇಕು ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಪಾಬ್ಲೊ ಡಿ ಗ್ರೇಫ್ ಎಚ್ಚರಿಕೆ ನೀಡಿದ್ದಾರೆ.
ಯುದ್ಧಾಪರಾಧಗಳ ಬಗ್ಗೆ ಶ್ರೀಲಂಕಾ ನಡೆಸುತ್ತಿರುವ ತನಿಖೆ ನಿಂತೇ ಹೋಗಿದೆ.
ದ್ವೀಪ ದೇಶದ 37 ವರ್ಷಗಳ ಆಂತರಿಕ ಯುದ್ಧದ ಅವಧಿಯಲ್ಲಿ ನಡೆಯಿತೆನ್ನಲಾದ ದೌರ್ಜನ್ಯಗಳಿಗೆ ನ್ಯಾಯ ಕೊಡುವುದಾಗಿ ತಾನು ನೀಡಿರುವ ಭರವಸೆಯನ್ನು ಈಡೇರಿಸುವಲ್ಲಿ ಶ್ರೀಲಂಕಾ ವಿಫಲವಾಗಿದೆ ಎಂದು ಅವರು ಹೇಳಿದರು.
ಯುದ್ಧದ ಅವಧಿಯಲ್ಲಿ ಶ್ರೀಲಂಕಾ ಸೇನೆಯ ಜನರಲ್ ಆಗಿದ್ದ ಜಗತ್ ಜಯಸೂರಿಯರನ್ನು ಈಗ ಬ್ರೆಝಿಲ್ ರಾಯಭಾರಿಯನ್ನಾಗಿ ನೇಮಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Next Story





