ಕರ್ಣಾಟಕ ಬ್ಯಾಂಕ್: ಮೂವರಿಗೆ ಜಿಎಂ ಹುದ್ದೆಗೆ ಭಡ್ತಿ

ಗೋಕುಲ್ದಾಸ್ ಪೈ, ಮಂಜುನಾಥ್ ಭಟ್, ಮಹಾಲಿಂಗೇಶ್ವರ
ಮಂಗಳೂರು, ಅ. 24: ಕರ್ಣಾಟಕ ಬ್ಯಾಂಕ್ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದ ಗೋಕುಲ್ದಾಸ್ ಪೈ, ಮಂಜುನಾಥ್ ಭಟ್ ಬಿ.ಕೆ ಹಾಗೂ ಮಹಾಬಲೇಶ್ವರ ಕೆ. ಅವರನ್ನು ಜನರಲ್ ಮ್ಯಾನೇಜರ್ ಹುದ್ದೆಗೆ ಭಡ್ತಿಗೊಳಿಸಲಾಗಿದೆ ಎಂದು ಬ್ಯಾಂಕ್ನ ಪ್ರಕಟನೆ ತಿಳಿಸಿದೆ.
ಗೋಕುಲ್ದಾಸ್ ಪೈ: ಉಡುಪಿಯ ಬೈದಬೆಟ್ಟು ಗ್ರಾಮದವರಾದ ಗೋಕುಲ್ದಾಸ್ ಪೈ 1990ರಲ್ಲಿ ಬ್ಯಾಂಕ್ನಲ್ಲಿ ಅಧಿಕಾರಿ ಹುದ್ದೆಗೆ ನೇಮಕಗೊಂಡಿದ್ದು ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2014ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಭಡ್ತಿ ಪಡೆದು ಬ್ಯಾಂಕ್ನ ಬೆಂಗಳೂರು ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಂಜುನಾಥ್ ಭಟ್ ಬಿ.ಕೆ : ಚಿಕ್ಕಮಗಳೂರು ಜಿಲ್ಲೆಯ ಭಂಡಿಗಾಡಿ ಗ್ರಾಮದವರಾದ ಮಂಜುನಾಥ್ ಭಟ್, 1987ರಲ್ಲಿ ಬ್ಯಾಂಕ್ನಲ್ಲಿ ಅಧಿಕಾರಿ ಹುದ್ದೆಗೆ ನೇಮಕಗೊಂಡಿದ್ದು ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2014ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಭಡ್ತಿ ಪಡೆದು ಬ್ಯಾಂಕ್ನ ಪ್ರಧಾನ ಕಚೇರಿಯ ಎಚ್ಆರ್- ಐಆರ್ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಹಾಲಿಂಗೇಶ್ವರ ಕೆ: ಕಾಸರಗೋಡು ಜಿಲ್ಲೆಯ ಪೆರ್ಲ ಗ್ರಾಮದವರಾದ ಮಹಾಲಿಂಗೇಶ್ವರ 1984ರಲ್ಲಿ ಬ್ಯಾಂಕ್ಗೆ ನೇಮಕಗೊಂಡಿದ್ದು ಕಳೆದ 33 ವರ್ಷಗಳಲ್ಲಿ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2014ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಭಡ್ತಿ ಪಡೆದು ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಸಾಲ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.







