ಆಧಾರ್-ಮೊಬೈಲ್ ಸಂಖ್ಯೆ ಜೋಡಣೆ: ಸುಪ್ರೀಂ ಕೋರ್ಟ್‌ನಲ್ಲಿ ದಾವೆ

ಹೊಸದಿಲ್ಲಿ, ಅ. 24: ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆ ಜೋಡಿಸುವ ಟೆಲಿಕಾಂ ಇಲಾಖೆಯ ಅಧಿಸೂಚೂನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಟೆಲಿಕಾಂ ಇಲಾಖೆಯ ಅಸಾಂವಿಧಾನಿಕ ಹಾಗೂ ಶೂನ್ಯ-ನಿರರ್ಥಕ ವಾಗಿರುವ ಮಾರ್ಚ್ 23ರ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿ ತೆಹ್ಸೀನ್ ಪೂನಾವಾಲಾ ಮನವಿ ಸಲ್ಲಿಸಿದ್ದಾರೆ.
ಈ ಅಧಿಸೂಚನೆಯ ಅನುಷ್ಠಾನ ರದ್ದುಗೊಳಿಸಬೇಕು ಹಾಗೂ ಈಗಾಗಲೇ ಸಂಗ್ರಹಿಸಲಾದ ಡಾಟಾವನ್ನು ನಾಶಗೊಳಿಸಲು ನಿರ್ದೇಶಿಸಬೇಕು ಎಂದು ಕೂಡ ಮನವಿಯಲ್ಲಿ ಕೋರಲಾಗಿದೆ.
Next Story





