ಬೈಂದೂರು ಸಿಪಿಎಂ ಶಾಖಾ ಸಮ್ಮೇಳನ

ಬೈಂದೂರು, ಅ.25: ಬೆಲೆ ಏರಿಕೆ ನಿಯಂತ್ರಣಕ್ಕೆ ಬಿಜೆಪಿಯೇ ಪರಿಹಾರ ವೆಂದು ಅಧಿಕಾರಕ್ಕೆ ಬಂದ ಬಿಜೆಪಿ ಇಂದು ಕಾಂಗ್ರೆಸ್ ನೀತಿಗಳನ್ನೆ ಅನುಸರಿಸು ತ್ತಿದೆ. ಇದರಿಂದ ಜನತೆ ತತ್ತರಿಸಿದ್ದಾರೆ ಎಂದು ಸಿಪಿಎಂ ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.
ಬೈಂದೂರು ಸಿಐಟಿಯು ಕಛೇರಿಯಲ್ಲಿ ಮಂಗಳವಾರ ನಡೆದ ಸಿಪಿಐಎಂ ಬೈಂದೂರು ಶಾಖಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೋದಿ ಸರಕಾರ ಜನರ ನೈಜ ಸಮಸ್ಯೆಗಳನ್ನು ಮಾತಾಡದಂತೆ ಧರ್ಮದ ವಿಚಾರಗಳನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದೆ. ಮೋದಿ ಸರಕಾರ ಸಂಪೂರ್ಣ ಆಡಳಿತ ವೈಫಲ್ಯ ಕಂಡಿದೆ ಎಂದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ವೆ ಂಕಟೇಶ್ ಕೋಣಿ ಮಾತನಾಡಿದರು. ಸದಸ್ಯ ಮಾಧವ ದೇವಾಡಿಗ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಗಣೇಶ್ ಮೊಗವೀರ ವರದಿ ಮಂಡಿಸಿದರು. ಗಣೇಶ್ ತೊಂಡೆಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ. ಶ್ರೀಧರ್ ಉಪಸ್ಥಿತರಿದ್ದರು.
Next Story





