ಡಾರ್ಜಿಲಿಂಗ್, ಕಲಿಂಪೋಂಗ್‌ನಲ್ಲಿ ಭದ್ರತಾಪಡೆ ಹಿಂದೆಗೆತ: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಹೊಸದಿಲ್ಲಿ, ಅ. 25: ಪಶ್ಚಿಮಬಂಗಾಳದ ಡಾರ್ಜಿಲಿಂಗ್ ಹಾಗೂ ಕಲಿಂಪೋಂಗ್‌ನಲ್ಲಿರುವ ಭದ್ರತಾ ಪಡೆಯನ್ನು ಹಿಂದೆಗೆಯುವ ಕೋಲ್ಕತಾ ಉಚ್ಚ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಎಂದು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ.
ವಿಷಯವನ್ನು ಅಕ್ಟೋಬರ್ 27ರಂದು ಪಟ್ಟಿ ಮಾಡಲಾಗುವುದು ಎಂದು ಜೆ. ಚಲಮೇಶ್ವರ್ ಹಾಗೂ ಎಸ್. ಅಬ್ದುಲ್ ನಸೀರ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಕೇಂದ್ರದ ಪರವಾಗಿ ಹಾಜರಾದ ವಕೀಲ ವಾಸಿಂ ಖಾದ್ರಿ, ಡಾರ್ಜಿಲಿಂಗ್ ಹಾಗೂ ಕಲಿಂಪೋಂಗ್‌ನ ಸಮಸ್ಯೆ ಇರುವ ಪ್ರದೇಶಗಳಿಂದ ಭದ್ರತಾ ಪಡೆ ಹಿಂದೆಗೆಯುವುದನ್ನು ರದ್ದುಗೊಳಿಸಿ ಕೋಲ್ಕತಾ ಉಚ್ಚ ನ್ಯಾಯಾಲಯ ಅಕ್ಟೋಬರ್ 27ರಂದು ಆದೇಶ ನೀಡಿದೆ ಎಂದರು.
ಚುನಾವಣೆ ನಡೆಯಲಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕೇಂದ್ರ ಸರಕಾರ ಭದ್ರತಾ ಪಡೆ ನಿಯೋಜಿಸುವ ಅಗತ್ಯತೆ ಇದೆ. ಜಮ್ಮ ಹಾಗೂ ಕಾಶ್ಮೀರದ ಗಡಿಗುಂಟ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕೂಡ ಭದ್ರತಾಪಡೆಯ ಕೆಲವು ತುಕಡಿಗಳನ್ನು ನಿಯೋಜಿಸಬೇಕಿದೆ ಎಂದು ಅವರು ಹೇಳಿದ್ದಾರೆ.
Next Story





