ರಶ್ಯ, ಯುಕ್ರೇನ್, ಜಪಾನ್ ಮೇಲೆ ಸೈಬರ್ ದಾಳಿ
ಯುಕ್ರೇನ್‌ನಲ್ಲಿ ವಿಮಾನ ವ್ಯವಸ್ಥೆ ಅಸ್ತವ್ಯಸ್ತ

ಮಾಸ್ಕೊ, ಅ. 25: ‘ಬ್ಯಾಡ್‌ರ್ಯಾಬಿಟ್’ ಎಂಬ ಮಾಲ್ವೇರ್ (ಕಳ್ಳ ಸಾಫ್ಟ್‌ವೇರ್) ಬಳಸಿ ರಶ್ಯ ಮತ್ತು ಇತರ ದೇಶಗಳ ಮೇಲೆ ಮಂಗಳವಾರ ಸೈಬರ್ ದಾಳಿ ನಡೆಸಲಾಗಿದೆ. ರಶ್ಯದ ಇಂಟರ್‌ಫ್ಯಾಕ್ಸ್ ನ್ಯೂಸ್ ಏಜನ್ಸಿ ದಾಳಿಗೆ ಒಳಗಾಗಿದೆ ಹಾಗೂ ಯುಕ್ರೇನ್‌ನ ಒಡಿಸಾ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ವಿಳಂಬವಾಯಿತು.
ಹೆಚ್ಚಿನ ಹಾನಿ ಬಗ್ಗೆ ವರದಿಯಾಗಿಲ್ಲ.
ಈ ಸೈಬರ್ ದಾಳಿಯ ಬಗ್ಗೆ ಅಮೆರಿಕ ಸರಕಾರ ಎಚ್ಚರಿಕೆ ಹೊರಡಿಸಿದೆ.
ಈ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ಇದೇ ಮಾದರಿಯ ಸೈಬರ್ ದಾಳಿಗಳು ನಡೆದಿರುವುದನ್ನು ಸ್ಮರಿಸಬಹುದಾಗಿದೆ. ಈ ದಾಳಿಗಳಿಂದಾಗಿ ಬಿಲಿಯಗಟ್ಟಳೆ ಡಾಲರ್ ನಷ್ಟ ಸಂಭವಿಸಿದೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದರು.
ಈ ದಾಳಿಗಳು ಹಾನಿಕಾರಕ ಯಾಕೆಂದರೆ, ಅವುಗಳು ಸಾರಿಗೆ ವ್ಯವಸ್ಥೆ ಸೇರಿದಂತೆ ಮಹತ್ವದ ಮೂಲಸೌಕರ್ಯ ವ್ಯವಸ್ಥೆಯನ್ನು ಹಾಳುಗೆಡವಿವೆ.
ದಾಳಿಯ ಹೆಚ್ಚಿನ ಸಂತ್ರಸ್ತರು ರಶ್ಯದವರಾಗಿದ್ದರು. ನಂತರದ ಸ್ಥಾನದಲ್ಲಿ ಯುಕ್ರೇನ್ ಬಂದರೆ, ಬಲ್ಗೇರಿಯ, ಟರ್ಕಿ ಮತ್ತು ಜಪಾನ್‌ಗಳಲ್ಲೂ ಸೈಬರ್ ದಾಳಿಗಳು ನಡೆದಿವೆ.
Next Story





