ಉಡುಪಿ: ಬ್ರಹ್ಮಾವರದಲ್ಲಿ ಬೆಂಕಿ ಅನಾಹುತ

ಉಡುಪಿ, ಅ. 25: ಬ್ರಹ್ಮಾವರ ಅಕ್ಷಯ ಫರ್ನೀಚರ್ ಮುಂಭಾಗದಲ್ಲಿನ ಗುಜರಿ ಅಂಗಡಿಗೆ ಬೆಂಕಿ ಬಿದ್ದ ಘಟನೆ ಇಂದು ರಾತ್ರಿ 8.30ರ ಸುಮಾರಿಗೆ ವರದಿಯಾಗಿದೆ.
ಘಟನೆಯಿಂದ ಗುಜರಿ ಅಂಗಡಿ ಹೊತ್ತಿ ಉರಿದಿದೆ. ಮೂಸ ಮತ್ತು ಅವರ ಪುತ್ರ ಸಮೀರ ಎಂಬವರಿಗೆ ಸೇರಿದ ಗುಜರಿ ಅಂಗಡಿ ಎಂದು ತಿಳಿದುಬಂದಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡಬೇಕಾಯಿತು. ಘಟನೆಯಿಂದು ಸುಮಾರು 3 ಲಕ್ಷ ರೂ. ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
Next Story





