ಅ.29ರಂದು ವೈ.ಕೆ.ರಾಮಯ್ಯ ಪ್ರಶಸ್ತಿ ಪ್ರದಾನ

ಮಂಡ್ಯ, ಅ.25: ನಗರದ ರೈತ ಸಭಾಂಗಣದಲ್ಲಿ ಅ.29ರಂದು ಸಂಜೆ 4ಕ್ಕೆ ವೈ.ಕೆ.ರಾಮಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಎಚ್.ಡಿ.ರೇವಣ್ಣ ಪ್ರಶಸ್ತಿ ಪ್ರದಾನಿಸುವರು. ಡಾ.ಎಚ್.ಎಸ್.ಮುದ್ದೇಗೌಡ ವೈ.ಕೆ.ರಾಮಯ್ಯ ಕುರಿತು ಮಾತನಾಡಲಿದ್ದು, ಎಂ.ಎ.ಖಾನ್ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.
ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ವೈ.ಕೆ.ರಾಮಯ್ಯ ಟ್ರಸ್ಟ್‌ನ ಅಧ್ಯಕ್ಷ ಎನ್.ಆರ್.ರಂಗಯ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಡಾ.ಎಚ್.ಕೆ.ಬಸವರಾಜು ಮತ್ತು ಮಂಡ್ಯ ತಾಲೂಕು ಬಿ.ಯರಹಳ್ಳಿಯ ಕೆ.ಚಂದ್ರಶೇಖರ್ ಅವರಿಗೆ ಕ್ರಮವಾಗಿ ವೈಕೆ.ರಾಮಯ್ಯ ರೇಷ್ಮೆ ತಜ್ಞ ಮತ್ತು ರೇಷ್ಮೆ ಕೃಷಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ತಲಾ 10 ಸಾವಿರ ರೂ. ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಅವರು ತಿಳಿಸಿದರು.
ಈ ಸಂಂದರ್ಭ ಪಿ.ಲೋಕೇಶ್ ಮತ್ತು ಎಂ.ಕೆ.ಹರೀಶ್‌ಕುಮಾರ್ ಉಪಸ್ಥಿತರಿದ್ದರು.





