ಅ.27 ರಂದು ಸಾಂಕೇತಿಕ ಪ್ರತಿಭಟನೆ: ಮಾಜಿ ಸಚಿವ ರಾಮದಾಸ್
ಮೈಸೂರು, ಅ.25: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾವಿಗೆ ಆಹ್ವಾನ ನೀಡುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಸರಕಾರ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ ಅ.27 ರಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಅಂದು ಬೆಳಗ್ಗೆ 10ಕ್ಕೆ ಜನಸಾಮಾನ್ಯರೇ ಸೇರಿ ರಸ್ತೆಗುಂಡಿ ಮುಚ್ಚುವ ಯೋಜನೆ ಹೊಂದಿದ್ದು, ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ಸಾರ್ವಜನಿಕ ಹಾಸ್ಟೇಲ್ ರಸ್ತೆ ಅಂದಾನಿ ಸರ್ಕಲ್‌ನಿಂದ ಸಿಲ್ಕ್ ಫ್ಯಾಕ್ಟರಿವರೆಗಿನ ರಸ್ತೆಯಲ್ಲಿ ಇರುವ 40ಕ್ಕೂ ಅಧಿಕ ರಸ್ತೆಗುಂಡಿಗಳನ್ನು ಸಾರ್ವಜನಿಕರ ಸಹಾಯದೊಂದಿಗೆ ಡಾಂಬರು ಮುಚ್ಚಿ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರಪಾಲಿಕೆಯ ಸದಸ್ಯ ಬಿ.ವಿ.ಮಂಜುನಾಥ್, ವಿ.ಫಣೀಶ್ ಮತ್ತಿತರರು ಉಪಸ್ಥಿತರಿದ್ದರು.
Next Story





