ವಿಯೆಟ್ನಾಂ ಓಪನ್: ಭಾಂಬ್ರಿ ಕ್ವಾರ್ಟರ್‌ಫೈನಲ್‌ಗೆ

ಹೊಸದಿಲ್ಲಿ, ಅ.25: ದಿಲ್ಲಿಯ ಆಟಗಾರ ಯೂಕಿ ಭಾಂಬ್ರಿ ವಿಯೆಟ್ನಾಂ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
142ನೆ ರ್ಯಾಂಕಿನ ಭಾಂಬ್ರಿ 50,000 ಡಾಲರ್ ಬಹುಮಾನ ಮೊತ್ತದ ಟೆನಿಸ್ ಟೂರ್ನಿಯ ಎರಡನೆ ಸುತ್ತಿನಲ್ಲಿ ಚೈನೀಸ್ ತೈಪೆಯ ಟಿ ಚೆನ್‌ರನ್ನು 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಚೆನ್ ವಿರುದ್ಧ ಅಜೇಯ ಗೆಲುವಿನ ಓಟ ಮುಂದುವರಿಸಿದ ಭಾಂಬ್ರಿ ತೈಪೆ ಆಟಗಾರನ ವಿರುದ್ದ ಸತತ 4ನೆ ಗೆಲುವು ಸಾಧಿಸಿದರು. 2014ರಲ್ಲಿ ಶಾಂೈ ಓಪನ್‌ನಲ್ಲಿ ಮೊದಲ ಬಾರಿ ಚೆನ್‌ರನ್ನು ಮಣಿಸಿದ್ದರು.
ಭಾಂಬ್ರಿ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ 8ನೆ ಶ್ರೇಯಾಂಕದ ಜಾನ್ ಮಿಲ್ಮನ್‌ರನ್ನು ಎದುರಿಸಲಿದ್ದಾರೆ. ಮಿಲ್ಮನ್ ಫ್ರಾನ್ಸ್‌ನ ಆ್ಯಂಟೊನಿ ಎಸ್ಕೊಫಿಯೆರ್‌ರನ್ನು 6-1, 6-4 ರಿಂದ ಮಣಿಸಿದ್ದಾರೆ.
ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯದ ಮಾರ್ಕ್ ಪೊಲ್ಮನ್ಸ್ ರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಪ್ರಜ್ಞೇಶ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಟೇಲರ್ ಫ್ರಿಟ್ಝ್ ರನ್ನು ಎದುರಿಸಲಿದ್ದಾರೆ. ಟೇಲರ್ ಭಾರತದ ವಿಜಯ್ ಸುಂದರ್ ಪ್ರಶಾಂತ್‌ರನ್ನು ಮಣಿಸಿದ್ದರು.







