ರಾಹುಲ್ ಮೋದಿಗಿಂತ ಭಿನ್ನ ಯಾಕೆ?
ಮಾನ್ಯರೆ,
ಪೇಯ್ಡ ಮೀಡಿಯಾಗಳು ಬಿಂಬಿಸಿದಂತೆ ರಾಹುಲ್ ಗಾಂಧಿ ಮಹಾನ್ ಬುದ್ಧ್ದಿವಂತರೂ ಅಲ್ಲ, ಅದೇ ತರಹ ಪೆದ್ದ ಅಥವಾ ದಡ್ಡರೂ ಅಲ್ಲ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಮೇಲೆ ರಾಹುಲ್ ಗಾಂಧಿಯವರಿಗೆ ಮೋದಿಗಿಂತ ತುಂಬಾ ಹೆಚ್ಚಿನ ಹಿಡಿತವಿದೆ. ಮೋದಿ ಇಂಗ್ಲಿಷ್ ಭಾಷಣ ಮಾಡುವುದು ಇತರರಿಂದ ಬರೆಸಿ ಮೊದಲೇ ಬಾಯಿಪಾಠ ಮಾಡಿದ ಮೇಲೆ ಮಾತ್ರ. ಸಂಘಿಗಳು ಹೇಳುವಂತೆ ರಾಹುಲ್ ಗಾಂಧಿ ನಿಜಕ್ಕೂ ದಡ್ಡ ಅಥವಾ ಅಪ್ರಬುದ್ಧ ಅನ್ನೋದಾದರೆ ಈ ಕೇಸರಿ ಭಕ್ತರು ಆರಾಧಿಸುವ ಮೋದಿಯವರು ರಾಹುಲ್‌ಗಿಂತಲೂ ನಾಲ್ಕೈದು ಪಟ್ಟು ಹೆಚ್ಚು ತಮಾಷೆಯ ಮತ್ತು ಬಾಲಿಶತನದ ನಡವಳಿಕೆ ತೋರಿಸಿರುವ ಉದಾಹರಣೆಗಳು ನಮಗೆ ಸಾಕಷ್ಟು ಸಿಗುತ್ತವೆ. ಅವುಗಳಲ್ಲಿ ಹಲವು ವಿದೇಶಗಳಲ್ಲಿ ಇತ್ತೀಚೆಗೆ ನಡೆದ ಪೆದ್ದ ಬಾಲಿಶ ಘಟನೆಗಳು. ಈ ಬಗ್ಗೆ ಸಂಘ ಪರಿವಾರಿಗರು ಮತ್ತು ಪೇಯ್ಡೆ ಮೀಡಿಯಾ ಚಕಾರವೆತ್ತುವುದಿಲ್ಲ. ಆದರೆ ಒಂದೇ ಒಂದು ವಿಷಯದಲ್ಲಿ ಮಾತ್ರ ರಾಹುಲ್ ಗಾಂಧಿ ನರೇಂದ್ರ ಮೋದಿಗಿಂತ ಅತ್ಯಂತ ಕಳಪೆ ಎಂದು ಇಡೀ ಜಗತ್ತೇ ಒಪ್ಪುತ್ತದೆ. ಸುಳ್ಳು ಹೇಳುವ ಕಲೆಯಲ್ಲಿ ಮೋದಿಗೆ ಹೋಲಿಸಿದರೆ ರಾಹುಲ್ ಗಾಂಧಿ ದಯನೀಯವಾಗಿ ಸೋಲುತ್ತಾರೆ. ಅವರು ಎಂತಹ ಮುಗ್ಧ ಎಂದರೆ ಸುಳ್ಳು ಹೇಳುವ ಪರಿ ಅವರಿಗೆ ಗೊತ್ತೇ ಇಲ್ಲ ಪಾಪ. ಈ ಮುಗ್ಧತನಕ್ಕಾಗಿ ರಾಹುಲ್ ಗಾಂಧಿಯನ್ನು ಪಪ್ಪುಅಥವಾ ಚೋಟಾ ಭೀಮ್ ಅಂದರೆ ತಪ್ಪಿಲ್ಲ.
- ಆರ್.ಬಿ. ಶೇಣವ, ಮಂಗಳೂರು





