ಶಾಸಕ ಲೋಬೊ ಅವರಿಂದ ಆರೋಗ್ಯ ಕೇಂದ್ರಗಳ ಪ್ರಗತಿ ಪರಿಶೀಲನೆ
ಮಂಗಳೂರು, ಅ.26: ನಗರದ ಜೆಪ್ಪು,ಬಂದರ್, ಕದ್ರಿಯ ಆರೋಗ್ಯ ಕೇಂದ್ರಗಳಲ್ಲಿ ಶೀಘ್ರ ಆಶಾ ಕಾರ್ಯಕರ್ತರನ್ನು ಭರ್ತಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿರುವ ಆರೋಗ್ಯ ಕೇಂದ್ರಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು. ಜೆಪ್ಪು ಮತ್ತು ಬಂದರ್ನಲ್ಲಿ ತಲಾ 6 ಹಾಗೂ ಕದ್ರಿಯಲ್ಲಿ 3 ಹುದ್ದೆಗಳಿದ್ದು, ಅವುಗಳಿಗೆ ತ್ವರಿತವಾಗಿ ನೇಮಕ ಮಾಡಬೇಕು ಎಂದ ಶಾಸಕ ಲೋಬೊ, ಆಶಾ ಕಾರ್ಯಕರ್ತರಿಗೆ ಮಾಸಿಕ 5 ಸಾವಿರ ರೂ.ವೇತನ ಮತ್ತು ಹೆಚ್ಚಿವರಿಗೆ ಭತ್ತೆ ನೀಡಲಾಗುತ್ತದೆ. ಸ್ಥಳೀಯರನ್ನು ಮಾತ್ರ ನೇಮಕ ಮಾಡಬೇಕು ಎಂದರು.
ಆರೋಗ್ಯ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡಿಸುವ ಬಗ್ಗೆ ಪ್ರಯತ್ನಿಸುತ್ತಿದ್ದು, ಆದಷ್ಟು ಬೇಗನೆ ಮಂಜೂರಾಗುವ ನಿರೀಕ್ಷೆ ಇದೆ. ಆರೋಗ್ಯ ಕೇಂದ್ರಗಳಿಗೆ ಸ್ಥಳಾವಕಾಶ ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಸೂಚಿಸಿದರು.
Next Story