ಗಾಂಜಾ ಸೇವನೆ: ಇಬ್ಬರು ವಶ
ಮಣಿಪಾಲ, ಅ.26: ಗಾಂಜಾ ಸೇವನೆ ಮಾಡುತಿದ್ದ ಆರೋಪದಲ್ಲಿ ಮಣಿಪಾಲ ಪೊಲೀಸರು ನಿನ್ನೆ ರಾತ್ರಿ ಇಬ್ಬರನ್ನು ಬಂಧಿಸಿದ ಘಟನೆ ಮಣಿಪಾಲದಿಂದ ವರದಿಯಾಗಿದೆ.
ಉಡುಪಿಯ ಪ್ರತೀಕ್ (25) ಎಂಬ ಯುವಕನನ್ನು ಮಣಿಪಾಲ ಆರ್ಟಿಒ ಕಚೇರಿ ಬಳಿ ರಾತ್ರಿ 8ಗಂಟೆಗೆ ವಶಕ್ಕೆ ಪಡೆದಿದ್ದರೆ, ಕುಕ್ಕಿಕಟ್ಟೆಯ ಇಮ್ತಿಯಾಜ್ ಖಾನ್ (29) ಎಂಬಾತನನ್ನು 8:10ಕ್ಕೆ ಬಂಧಿಸಲಾಯಿತು. ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾದಂಥ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story