ಕ್ಯಾಡ್‌ಬರಿ ಚಾಕಲೇಟ್‌ನಲ್ಲಿ ಹುಳ: 50 ಸಾವಿರ ರೂ. ದಂಡ

ಗುಂಟೂರು, ಅ. 26: ಗ್ರಾಹಕನಿಗೆ ಬ್ಯಾಕ್ಟೀರಿಯಾ ಕಲುಷಿತ ಚಾಕಲೇಟ್ ಪೂರೈಸಿದ ಕ್ಯಾಡ್‌ಬರಿ ಇಂಡಿಯಾದ ಪೋಷಕ ಕಂಪೆನಿಯಾದ ಮೊಂಡೆಲೆಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್‌ಗೆ ಗುಂಟೂರ್‌ನ ಗ್ರಾಹಕ ವೇದಿಕೆ 50 ಸಾವಿರ ದಂಡ ವಿಧಿಸಿದೆ.
ಬ್ರೋಡಿಪೇಟ್ ನಿವಾಸಿ ಅನುಪಮಾ ಅವರು 2016 ಜುಲೈ 17ರಂದು ಸ್ಥಳೀಯ ಅಂಗಡಿಯೊಂದರಿಂದ ಎರಡು ಕ್ಯಾಡ್‌ಬರಿ ಡೈರಿ ಮಿಲ್ಕ್ ಚಾಕಲೇಟ್ ಖರೀದಿಸಿದ್ದರು. ಕುಟುಂಬದ ಸದಸ್ಯರು ರುಚಿ ನೋಡಿದಾಗ ಈ ಚಾಕಲೇಟ್ ಕಹಿ ಇತ್ತು. ಅನುಪಮಾ ಚಾಕಲೇಟ್‌ನ ಎರಡನೇ ರ್ಯಾಪರ್ ತೆರೆದಾಗ ಅದರಲ್ಲಿ ಹುಳಗಳಿದ್ದವು. ಈ ಸಂಬಂಧ ಅವರು ಕಳೆದ ವರ್ಷ 6ರಂದು ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
Next Story





