ಜ. 1ರಿಂದ ಮುಂಬೈಯಲ್ಲಿ ಎಸಿ ಲೋಕಲ್ ರೈಲು ಆರಂಭ

ಹೊಸದಿಲ್ಲಿ, ಅ. 26: ರೈಲ್ವೆಯ ಹೊಸವರ್ಷದ ಕೊಡುಗೆಯಾಗಿ ಮುಂಬೈ ಪ್ರಯಾಣಿಕರು ಹವಾನಿಯಂತ್ರಿತ ಲೋಕಲ್ ರೈಲಿನ ಸೌಲಭ್ಯ ಪಡೆಯಲಿದ್ದಾರೆ.
ಪಶ್ಚಿಮ ರೈಲ್ವೆಯಲ್ಲಿ ಜನವರಿ 1ರಿಂದ ಮೊದಲ ಹವಾನಿಯಂತ್ರಿತ ರೈಲನ್ನು ಪರಿಚಯಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಆರಂಭದಲ್ಲಿ ಪಶ್ಚಿಮ ರೈಲ್ವೆಯಲ್ಲಿ ಹವಾನಿಯಂತ್ರಿತ ರೈಲು ದಿನಂಪ್ರತಿ 7 ಸೇವೆಗಳನ್ನು ನೀಡಲಿದೆ. ಪ್ರಥಮ ದರ್ಜೆ ದರದಷ್ಟೇ ದರದ ಟಿಕೆಟ್ ಈ ರೈಲಿನಲ್ಲಿ ಪ್ರಯಾಣಕ್ಕೆ ಸಾಕಾಗುತ್ತದೆ. ಆದರೆ, ಸೀಸನ್ ಪಾಸ್‌ನ ದರ 1.5 ಪಾಲು ಹೆಚ್ಚಾಗುವ ಸಾಧ್ಯತೆ ಇದೆ.
ರೈಲ್ವೆ ಹೆಚ್ಚುವರಿಯಾಗಿ 9 ಇಎಂಯು (ಇಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್) ಹವಾನಿಯಂತ್ರಿತ ರೈಲುಗಳನ್ನು ಹೊಂದಲಿದೆ. ಕೇಂದ್ರ ರೈಲ್ವೆಯಲ್ಲೂ ಈ ಸೇವೆ ಆರಂಭವಾಗುವ ಸಾಧ್ಯತೆ ಇದೆ.
Next Story







