ಇಂಡಿಯನ್ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸಿಬಿಷನ್‌ಗೆ ಚಾಲನೆ

ಮಂಗಳೂರು, ಅ. 27: ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್‌ಎಕ್ಸಿಬಿಷನ್ (ಐಐಟಿಇ) ವತಿಯಿಂದ ನಗರದ ನವಭಾರತ ಸರ್ಕಲ್ ಬಳಿಯ ಟಿ.ವಿ.ರಮಣ ಪೈ ಕನ್ವನ್‌ಷನ್ ಸೆಂಟರ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಭಾರತದ ಅತ್ಯುತ್ಕೃಷ್ಟ ಸಾರಿಗೆ ಮತ್ತು ಪ್ರವಾಸೋದ್ಯಮದ ಬೃಹತ್ ಪ್ರದರ್ಶನಕ್ಕೆ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಚಾಲನೆ ನೀಡಿದರು.
ಪ್ರವಾಸೋದ್ಯಮದ ಕುರಿತು ಇಂತಹ ಪ್ರದರ್ಶನಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವಂತಾಗಬೇಕು. ಪ್ರದರ್ಶನವು ಇಲ್ಲಿನ ಜನರಿಗೆ ಹೊಸ ಅವಕಾಶವನ್ನು ಮಾಡಿಕೊಟ್ಟಿದೆ ಎಂದರು.
ಈ ಸಂದರ್ಭ ಐಐಟಿಇಯ ನಿರ್ದೇಶಕ ಅನುರಾಗ್ ಗುಪಾತಿ ಮಾತನಾಡಿ, ಈ ಎಕ್ಸಿಬಿಷನ್‌ನಲ್ಲಿ ಸಾರಿಗೆ, ಪ್ರವಾಸ, ರೈಲ್ವೇಸ್, ಆತಿಥ್ಯ ಮತ್ತಿನ್ನಿತರ ಪೂರಕ ಸಂಗತಿಗಳ ಬಗ್ಗೆ ಜನರಿಗೆ ಪರಿಚಯಿಸಲಾಗುತ್ತದೆ. ಈ ಪ್ರದರ್ಶನದಲ್ಲಿ ಪ್ರಮುಖವಾಗಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರವಾಸಿ ಕೇಂದ್ರಗಳು, ಹೋಟೆಲ್‌ಗಳು, ರಿಸಾರ್ಟ್‌ಗಳು ಹಾಗೂ ಇನ್ನಿತರ ಸೇವೆಗಳನ್ನು ಪೂರೈಸುವವರ ಕುರಿತಾದ ವಿಸ್ತೃತ ಮಾಹಿತಿ ಒದಗಿಸಲಾಗುತ್ತದೆ ಎಂದರು.
ಅ.27,28, 29ರ ವರೆಗೆ ಪ್ರತಿ ದಿನ ಬೆಳಗ್ಗೆ 11.30 ರಿಂದ ರಾತ್ರಿ 7.30ರ ವರೆಗೆ ಎಕ್ಸಿಬಿಷನ್ ತೆರೆದುಕೊಂಡಿದ್ದು, ಪ್ರವೇಶ ಉಚಿತವಾಗಿದೆ. ಈ ಸಂದರ್ಭ ಕಲ್ಕೂರಾ ಜಾಹೀರಾತು ಸಂಸ್ಥೆಯ ಎಂ. ನಾರಾಯಣ್ ಭಟ್ ಉಪಸ್ಥಿತರಿದ್ದರು.
ಗಮನ ಸೆಳೆದ ಮಳಿಗೆಗಳು:
ಮಧ್ಯ ಪ್ರದೇಶದ ಪ್ರವಾಸೋದ್ಯಮ, ಜಾರ್ಕಂಡ್ ಪ್ರವಾಸೋದ್ಯಮ, ಉತ್ತರಖಂಡ ಪ್ರವಾಸೋದ್ಯಮ, ಗುಜರಾತ್ ಪ್ರವಾಸೋದ್ಯಮ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಗಳು, ರಾಜ್ಯ ಪ್ರವಾಸೋದ್ಯಮ ಇಲಾಖೆಗಳಿಗೆ ಪ್ರದರ್ಶನದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಪ್ರಮುಖ ಟ್ರಾವೆಲ್‌ಏಜೆಂಟ್‌ಗಳು ಹೋಟೆಲ್‌ಗಳು, ರೆಸಾರ್ಟ್‌ಗಳು ಭಾಗವಹಿಸಿದ್ದವು.







