ಅಕ್ರಮ ಮರಳು ಸಾಗಾಟ: ಟೆಂಪೊ ವಶಕ್ಕೆ
ಕುಂದಾಪುರ, ಅ.27: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟೆಂಪೊವನ್ನು ಕುಂದಾಪುರ ಪೊಲೀಸರು ಅ.27ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಆನಗಳ್ಳಿ ಗ್ರಾಮದ ಕಳಂಜೆ ಅಂಗನವಾಡಿ ಕೇಂದ್ರದ ಬಳಿ ವಶಪಡಿಸಿಕೊಂಡಿ ದ್ದಾರೆ.
ಆನಗಳ್ಳಿ ರೈಲ್ವೆ ಬ್ರಿಜ್ ಬಳಿ ವರಾಹಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಮಾರ್ಕೋಡು ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 407 ಟೆಂಪೋವನ್ನು 4500ರೂ. ವೌಲ್ಯದ ಒಂದೂವರೆ ಯುನಿಟ್ ಮರಳು ಸಹಿತ ಪೊಲೀಸರು ವಶಪಡಿಸಿಕೊಂಡಿದ್ದು, ಈ ವೇಳೆ ಟೆಂಪೋ ಚಾಲಕನು ಓಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Next Story





